ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ
ಹೂವಿನಹಡಗಲಿ 14: ತಾಲ್ಲೂಕು ಜನತಾ ಪಾರ್ಟಿಯಿಂದ ಗುರುವಾರ ಪಟ್ಟಣದ ಗೋಣಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಮಂಡಲ ಅಧ್ಯಕ್ಷ ಸಂಜೀವ ರೆಡ್ಡಿ ಚಾಲನೆ ನೀಡಿದರು.
ಐತಿಹಾಸಿಕ ಶ್ರೀ ಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನ ಹಾಗೂ ಹಲವಾರು ಗ್ರಾಮಗಳಿಂದ .ಈ ಮೃತ್ತಿಕೆಯನ್ನು ನವದೆಹಲಿಯ ಕರ್ತವ್ಯ ಪಥದಲ್ಲಿರುವ ಹುತಾತ್ಮ ಯೋಧರ ಗೌರವಾರ್ಥ ನಿರ್ಮಾಣವಾಗಲಿರುವ ಅಮೃತಾ ಉದ್ಯಾನ ವನದಲ್ಲಿ (ಅಮೃತಾ ವಾಟಿಕ) ಉಪಯೋಗಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಓದೋ ಗಂಗಪ್ಪ, ಎಂ ಪರಮೇಶಪ್ಪ, ಜಿಲ್ಲಾ ಮೋರ್ಚಾ ಅಧ್ಯಕ್ಷ ಈಟಿ ಲಿಂಗರಾಜ್ ಬಿ ಸಿರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಸಂಚಾಲಕ ಜೆ ಪರಶುರಾಮ್ ಪದಾಧಿಕಾರಿಗಳಾದ ಮೀರಾಬಾಯಿ, ಭಾಗ್ಯಮ್ಮ, ವಿಜಯಲಕ್ಷ್ಮಿ, ಶಿವನಗೌಡ, ಕೊಟ್ರೇಶ್ ನಾಯ್ಕ್, ಪುರಸಭೆ ಸದಸ್ಯರಾದ ಅಪ್ಪಣ್ಣ, ಶಂಕ್ರ್ಪ, ಪರಶುರಾಮ್ ಕಲಾಲ್ ನಂದಿಹಳ್ಳಿ ಬಸಣ್ಣ ಸುರೇಶ್ ಕಾಗನೂರ್, ಕೊಟ್ರೇಶ್ ಬಾವಿಮನಿ, ಶರಣಪ್ಪ, ನೋಹರ ನಂದಿಹಳ್ಳಿ, ಮಂಜುನಾಥ್ ಮದಲಗಟ್ಟಿ, ಅಶೋಕ್ ಸೋಗಿ ಹಾಗೂ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.