ಸಿಂಧಗಿ

ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಸಿಂದಗಿ 23: ಕೊಕಟನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿ. 23ರಂದು ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷ ರಜಾಕಬಿ ಮೈಬೂಸಾಬ್ ಮುಲ್ಲಾ ಚಾಲನೆ ನೀಡಿದರು.  

ಗ್ರಾಮದ ಯುವ ನಾಯಕ ಪೈಗಂಬರ ಮುಲ್ಲಾ ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ತಾಲೂಕಿನಲ್ಲಿಯೇ ಉತ್ತಮ ಪ್ರಗತಿ ಸಾಧಿಸಿದ್ದು ಇದರಿಂದ ಸಾಕಷ್ಟು ಬಡವರಿಗೆ ಹಿಂದುಳಿದವರಿಗೆ ಅನುಕೂಲವಾಗಿದೆ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಿವೆ ಅವುಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಹೇಳಿದರು. ಕೊಕಟನೂರ ಗ್ರಾಮದಲ್ಲಿ ನಿರ್ಮಾಣವಾದ ಘನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲೂ ಗಿಡ ಹಚ್ಚಲು ಗುಂಡಿ ತೆಗೆಯುವ ಮೂಲಕ ಈ ವರ್ಷದ ಕೆಲಸ ಆರಂಭವಾಯಿತು.   

ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಐಇಸಿ ಸಂಯೋಜಕರಾದ ಭೀಮರಾಯ ಚೌಧರಿಯವರು ಕೇಂದ್ರ ಸರಕಾರದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗವನ್ನು ವೈಯಕ್ತಿಕ ಕಾಮಗಾರಿಗಳು ಮತ್ತು ಸಮುದಾಯ ಕಾಮಗಾರಿಗಳು ಬರುತ್ತವೆ ಇವುಗಳ ಉತ್ತ್ಮವಾಗಿ ಸದ್ಬಳಕೆ ಮಾಡಿಕೊಳ್ಳುವದು ಹಾಗೂ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 100ದಿನ ಉದ್ಯೋಗ ಪಡೆಯಿರಿ ಮತ್ತು ನಿಮ್ಮ ಊರಲ್ಲೆ ನಿರಂತರ 100 ದಿನ ಕೆಲಸ ಬೇಸಿಗೆಯಲ್ಲಿ ಪಡೆಯಬಹುದು ಎಂದು ತಿಳಿಸಿದರು.  

ಪಂಚಾಯತಿ ಅಭಿವೃದ್ದಿ ಅಧಿಕಾರಿ ವಸಂತ ಅಮೀನಗಡ ಮಾತನಾಡಿ ಈ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ವಲಸೆ ಹೋಗುವದನ್ನು ತಪ್ಪಿಸಲು ತುಂಬಾ ಸಹಕಾರಿಯಾಗಿದೆ ಆದ್ದರಿಂದ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಮೇಶ ಚಿನ್ನಾಕರ್ ಸದಸ್ಯ ಬಾಬು ರಾಠೋಡ, ಪರಸುರಾಮ ಜವಳಗಿ, ಮಡಿವಾಳ ಕಾಂಬಳೆ, ತಾಂತ್ರಿಕ ಸಹಾಯಕರು ರವಿ ಜಮಖಂಡಿ, ಬಿಲ್ಲ್‌ ಕಲೆಕ್ಟರ್ ಮೈಬು ಬಡಿಗೇರ, ಡಿಇಒ ಶೇಖರ ಕಾಂಬಳೆ,  ಖರೋಷಿ, ಗ್ರಾಮ ಕಾಯಕ ಮಿತ್ರ ಮಹಾನಂದ ಬಡಿಗೇರ ಹಾಗೂ ಕಾಯಕ ಬಂದು ಯಮುನಾಬಾಯಿ, ನಿಂಗು ಬಡಿಗೇರ, ವಿನೋದ ನಾಯಿಕ ಇದ್ದರು. 


ಸುದ್ದಿ ಓದಿ