ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ
ಕಾಗವಾಡ,03: ನಾನು ಕಳೆದ 35 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಐದು ಸಲ ಶಾಸಕನಾಗಿ ಆಯ್ಕೆಯಾಗಿದ್ದೇನೆ. 2 ಲಕ್ಷ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಪ್ರಾಮಾಣಿಕವಾಗಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನರ ಸೇವೆ ಸಲ್ಲಿಸುತ್ತಿದ್ದೇನೆ. ಆದರೇ ಮಾಜಿ ಶಾಸರು ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಮಾಯಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅಲ್ಲದೇ ಬಸವೇಶ್ವರ ಯಾತ ನೀರಾವರಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಸೋಮವಾರ ದಿ. 02 ರಂದು ತಾಲೂಕಿನ ಐನಾಪೂರ ಪಟ್ಟಣದಲ್ಲಿ ರೂ. 14.13 ಕೋಟಿ ವೆಚ್ಚದ ಅಮೃತ-2 ಯೋಜನೆಯ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು. ನನ್ನ ಬಗ್ಗೆ ಇಲ್ಲಸಲ್ಲದ ಆಪಾದನೆ ಮಾಡಿ ಮಾಜಿ ಶಾಸಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ನಾನು ಎಂದೂ ಯಾರ ಮೇಲೆಯೋ ದಬ್ಬಾಳಿಕೆ, ಭ್ರಷ್ಟಾಚಾರ ಮಾಡಿಲ್ಲ. ಒಬ್ಬರೇ ಒಬ್ಬರು ಬಂದು ನಾನು ದಬ್ಬಾಳಿಕೆ ಮಾಡಿದ್ದನೆ ಎಂದು ಹೇಳಿದರೇ ಅದೇ ದಿನ ರಾಜೀನಾಮೆ ನೀಡುತ್ತನೆ. ಇದೇ ರೀತಿ ನನ್ನ ತಂಟೆಗೆ ಬಂದರೇ ನಾನು ಸುಮ್ಮನೆ ಇರಲ್ಲ. ನಿಮ್ಮ ಬಂಡವಾಳ ಬಯಲು ಮಾಡಿ, ನಿಮ್ಮ ಬಟ್ಟೆ ಬಿಚ್ಚುವ ಕೆಲಸ ಮಾಡುತ್ತೇನೆಂದು ಮಾಜಿ ಸಚಿರವ ವಿರುದ್ಧ ಹರಿಹಾಯ್ದರು.
ಬಸವೇಶ್ವರ ಯಾತ ನೀರಾವರಿ ಯೋಜನೆ ಕೊನೆಯ ಹಂತದಲ್ಲಿದ್ದು, ಗುತ್ತಿದಾರನ ಅಕೌಂಟ ಸೀಜ ಆಗಿದ್ದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಆದರೂ 50 ಕೋಟಿ ರೂ. ಸರಕಾರದಿಂದ ಬಿಡುಗಡೆ ಮಾಡಿಸಿದ್ದೇನೆ. ಅತೀ ಶೀಘ್ರ ಕಾಮಗಾರಿ ಮುಗಿಸಿ, ಆ ಭಾಗದ ರೈತರಿಗೆ ಅನುಕೂಲ ಮಾಡಲಾಗುವುದು ಎಂದರು. ಇನ್ನೂ ವಿರೋಧ ಪಕ್ಷದವರು ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವದು ಶುದ್ಧ ಸುಳ್ಳು.ಈಗ ಐನಾಪೂರ ಪಟ್ಟಣಕ್ಕೆ 14 ಕೋಟಿ 13 ಲಕ್ಷ ರೂ.ಗಳ ಯೋಜನೆ ರೂ. ಕಾಗವಾಡದಲ್ಲಿ 30 ಕೋಟಿಗಳ ರಸ್ತೆ ಅಭಿವೃದ್ಧಿಯ ಯೋಜನೆಗೆ ಚಾಲನ ನೀಡಲಿದ್ದೇವೆ. ಇದು ಅಭಿವೃದ್ಧಿ ಅಲ್ಲವೇ ಎಂದು ತಿರಗೇಟು ನೀಡಿದರು.
ಈ ವೇಳೇ ಅನೇಕ ಮುಖಂಡರು ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ಪ.ಪಂ. ಅಧ್ಯಕ್ಷೆ ಸರೋಜಿನಿ ಗಾಣಿಗೇರ, ಉಪಾಧ್ಯಕ್ಷೆ ರತ್ನವ್ವಾ ಮಾದರ, ಸದಸ್ಯ ಅರುಣ ಗಾಣಿಗೇರ, ಸಂಜು ಭಿರಡಿ, ಸಂಜಯ ಕುಚನೂರೆ, ಕುಮಾರ ಜೈಕರ, ಮುಖ್ಯಾಧಿಕಾರಿ ಮಹಾಂತೇಶ ಕೌಲಾಪೂರೆ, ಸುರೇಶ ಗಾಣಿಗೇರ, ಗುರುರಾಜ ಮಡಿವಾಳ, ಪ್ರಕಾಶ ಕೋರ್ಬು, ಡಾ. ಅರವಿಂದ ಕಾರ್ಚಿ, ಗೋಪಾಲ ಕಟ್ಟಿ, ಚಮನರಾವ ಪಾಟೀಲ, ಸುಭಾಷ ಪಾಟೀಲ, ಅಭಿಯಂತರ ಆರ್.ಕೆ. ಉಮೇಶ ಸ್ವಾಗತಿಸಿದರು. ಅಭಿಯಂತರ ಅಜೀತ ಚೌಗಲಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಹೇಶ ಸೊಲ್ಲಾಪೂರ ನಿರೂಪಿಸಿದರು.