ರಾಣೆಬೆನ್ನೂರ

ಚೌಡೇಶ್ವರಿ ದೇವಿಯ ಮೆರವಣಿಗೆಗೆ ಚಾಲನೆ

ಚೌಡೇಶ್ವರಿ ದೇವಿಯ ಮೆರವಣಿಗೆಗೆ ಚಾಲನೆ

ರಾಣಿಬೆನ್ನೂರ 24:  ಗ್ರಾಮ ದೇವತೆ ಗಂಗಾಜಲ ಚೌಡೇಶ್ವರಿ ದೇವಿಯ ಮೆರವಣಿಗೆಯು ಸಹಸ್ರಾರು ಭಕ್ತರ, ಅಭಿಮಾನಿಗಳ ಮಧ್ಯ ಸೋಮವಾರ ಅದ್ದೂರಿಯಾಗಿ  ನೆರವೇರಿತು ತಳವಾರ ಗಲ್ಲಿಯ ಮೂಲ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ಶಾಸಕ ಪ್ರಕಾಶ್ ಕೋಳಿವಾಡ್ ಚಾಲನೆ ನೀಡಿದರು.  

ಮಾಜಿ ಶಾಸಕ ಅರುಣಕುಮಾರ ಪೂಜಾರ,  ಸಮಿತಿ ಅಧ್ಯಕ್ಷ ಬಸವರಾಜ ನಾಯಕ, ಕಾರ್ಯದರ್ಶಿ ನಾರಾಯಣಪ್ಪ ಬಿಷ್ಟಣ್ಣನವರ, ಶಶಿಧರ ಬಸೇನಾಯ್ಕರ, ಭಾರತಿ ಜಂಬಗಿ, ಬಸವರಾಜ ಕೇಲಗಾರ, ಕೆ. ಶಿವಲಿಂಗಪ್ಪ, ಎಸ್‌.ಎಸ್‌.  ರಾಮಲಿಂಗಣ್ಣನವರ್, ಪುಟ್ಟಪ್ಪ ಮರಿಯಮ್ಮನವರ,  ಬಸವರಾಜ ಹುಚ್ಚಗೊಂಡರ, ಮಂಜುನಾಥ ಮಠಪತಿ, ರವೀಂದ್ರಗೌಡ ಪಾಟೀಲ ಮತ್ತಿತರರು ಭಾಗವಹಿಸಿದ್ದರು. 

ಗ್ರಾಮೀಣ ಸೊಗಡಿನ ಕೋಲಾಟ, ಕುದುರೆ ಕುಣಿತ, ಛಾಮರಸ, ಬಣ್ಣಬಣ್ಣದ ಸಿಡಿಮದ್ದು, ಕತ್ತಿ ವರಸೆ,  ಲೇಜೀಮ್, ಸಮಾಳ, ಮಹಿಳೆಯರ ಡೊಳ್ಳು ಕುಣಿತ,  ಸೇರಿದಂತೆ ಮತ್ತಿತರ ವಾಧ್ಯಮೇಳಗಳು ಮೆರವಣಿಗೆಗೆ ಸಾಥ ನೀಡಿದವು.  

ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಂಗಳವಾರ ಬೆಳಗಿನ ಜಾವ ಮೇಡ್ಲೇರಿ ರಸ್ತೆಯಲ್ಲಿನ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಜ.27 ರವರೆಗೂ ದೇವಿಯ ಜಾತ್ರೋತ್ಸವ ನಡೆಯಲಿದೆ. 


ಸುದ್ದಿ ಓದಿ