ಅಂಗನವಾಡಿ ಕಟ್ಟಡಕ್ಕೆ ಸಚಿವ ಶ್ರೀಮಂತ ಪಾಟೀಲ ಚಾಲನೆ
ಕಾಗವಾಡ 20: ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರಗುಪ್ಪಿ ಗ್ರಾಮದಲ್ಲಿ 17 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಇಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ಚಾಲನೆ ನೀಡಿದರು.
ಶಿರಗುಪ್ಪಿ ಗ್ರಾಮದಲ್ಲಿ 17 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ಹಾಗೂ ಶಿರಗುಪ್ಪಿ-ಜುಗೂಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಶೇ.50 ರಷ್ಟು ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬಹಳ ದಿನಗಳಿಂದ ಈ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಕೊಠಡಿಗಳ ಕೊರತೆ ಎದ್ದು ಕಾಣುತ್ತಿತ್ತು. ಅದಕ್ಕೆ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸಲಾಗಿದೆ. ಎಲ್ಲ ಕಡೆಗೂ ಅವಶ್ಯಕತೆಗನುಗುಣವಾಗಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಬೆಕೇಂದ್ರ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಲೊಕೋಪಯೋಗಿ ಇಲಾಖೆಯ ಅಭಿಯಂತರರಾದ ಜೆ.ಎ.ಹಿರೇಮಠ, ಆರ್.ಪಿ.ಅವತಾಡೆ, ಎಮ್.ಎಸ್.ಮಗದುಮ್, ಗುತ್ತಿಗೆದಾರ ರಾಜು ಮುಲ್ಲಾ, ಮುಖಂಡರಾದ ಅಭಯಕುಮಾರ ಅಕಿವಾಟೆ, ರಾಮಗೌಡ ಪಾಟೀಲ, ಭಮ್ಮಣ್ಣಾ ಚೌಗುಲೆ, ದೀಪುಗೌಡ ಪಾಟೀಲ, ಸುಭಾಷ ಮೋನೆ, ಮಹಾವೀರ ಕಾತ್ರಾಳೆ, ರಮಾಕಾಂತ ಬಾಡಗೆ, ಶಿವಾನಂದ ಪಾಟೀಲ, ಸೊಮೇಶ ಪಾಟೀಲ, ಪಂಡಿತ ವಡ್ಡರ, ಅಣ್ಣಾಸಾಬ ಪಾಟೀಲ, ಕಾಕಾ ಪಾಟೀಲ, ವಿಜಯಕುಮಾರ ಅಕಿವಾಟೆ, ನಾನಾಸಾಹೇಬ ಅವತಾಡೆ, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಅನೇಕರು ಇದ್ದರು.