ಗುಳೇಗುಡ್ಡ

1100 ಸಸಿ ನೆಡುವ ವನಮಹೋತ್ಸವಕ್ಕೆ ಚಾಲನೆ

1100 ಸಸಿ ನೆಡುವ ವನಮಹೋತ್ಸವಕ್ಕೆ ಚಾಲನೆ
ತಾಲೂಕಿನ ಲಾಯದಗುಂದಿ ಗ್ರಾಮದಲ್ಲಿ ಏಕಲ್ ವಿದ್ಯಾಲಯದಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಗುಳೇದಗುಡ್ಡ.24:  ಏಕಲ್ ಅಭಿಯಾನ ಕರ್ನಾಟಕ ಬಾಗಲಕೋಟ ಅಂಚಲ ಗುಳೇದಗುಡ್ಡ ಸಂಚ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ವೃಕ್ಷಾರೋಪನ ಕಾರ್ಯಕ್ರಮ ವನಮಹೋತ್ಸವ ಕಾರ್ಯಕ್ರಮ ನಡೆಯಿತು. 

ಗುಳೇದಗುಡ್ಡ ತಾಲೂಕಿನ ಆಸಂಗಿ, ಕಟಗಿನಹಳ್ಳಿ, ಕೊಟ್ನಳ್ಳಿ, ನಾಗರಾಳ ಹೀಗೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಏಕಲ್ ಅಭಿಯಾನದ ಸದಸ್ಯರು ಹಾಗೂ ಏಕಲ್ ವಿದ್ಯಾಲಯದ ಆಚಾರ್ಯರು ತಮ್ಮ ತಮ್ಮ ಗ್ರಾಮಗಳಲ್ಲಿ ಸಸಿಗಳನ್ನು ನೆಟ್ಟು ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. 

ಏಕಲ್ ಅಭಿಯಾನದ ಸದಸ್ಯ ಮಹಾದೇವ ಜಗತಾಪ ಮಾತನಾಡಿ, ದೇಶದಲ್ಲಿ ಹಳ್ಳಿಗಳಲ್ಲಿ ಲಕ್ಷಕ್ಕೂ ಮೀರಿ ಏಕಲ್ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಪಂಚಮುಖಿ ಶಿಕ್ಷಣದ ಮೂಲಕ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿ ನಡೆದಿದೆ. ಮಕ್ಕಳಿಗೆ ಉದ್ಯೋಗ ಆಧಾರಿತ ಶಿಕ್ಷಣ ನೀಡುವ ಪಂಚಮುಖಿ ಶಿಕ್ಷಣ ಮಕ್ಕಳ ಆದರ್ಶ ಹಾಗೂ ಭವ್ಯ ಭವಿಷ್ಯತ್ತಿನ ನಿರ್ಮಾಣಕ್ಕೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು. 

ಲಾಯದಗುಂದಿ ಗ್ರಾಪಂ ಅಧ್ಯಕ್ಷ ಬಸವರಾಜ ಜಂಗಮರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಏಕಲ್ ವಿದ್ಯಾಲಯ ಅಧ್ಯಕ್ಷ ಡಾ.ವಿ.ಎ.ಬೆಕಿನಾಳ, ಏಕಲ್ ಅಭಿಯಾನದ ಬಾಗಲಕೋಟ ಅಂಚಲ ಪ್ರಶಿಕ್ಷಣ ಪ್ರಮುಖ ಚನ್ನಪ್ಪ ಅಮರಾವತಿ, ಅಂಚಲ ಗತಿವಿಧಿ ಪ್ರಮುಖ ರೇಣುಕಾ ದೀದಿ, ಏಕಲ್ ಅಭಿಯಾನದ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಜೋಗುರ ಮಾತನಾಡಿದರು. 

ಏಕಲ್ ವಿದ್ಯಾಲಯದ ಸದಸ್ಯ ವಿಷ್ಣು ಬಳಿಗೇರ, ಸವಿತಾ ಉಂಕಿ, ಶರಣು ಚಿಕ್ಕನರಗುಂದ, ಮಲ್ಲಿಕಾರ್ಜುನ ರಾಜನಾಳ, ಆಚಾರ್ಯ ಲಕ್ಷ್ಮಣ ಉಪ್ಪಾರ, ಲಕ್ಷ್ಮೀ ಪಾಗದ, ಸಾವಿತ್ರಿ ಮಜ್ಜಗಿ, ಶಿಲ್ಪಾ ಆಡಿನ, ವಿದ್ಯಾ ಜಗತಾಪ, ಶಶಿಕಲಾ ಜಗತಾಪ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ