ಅಥಣಿ

ಗಚ್ಚಿನಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಸವದಿ ಚಾಲನೆ

ಗಚ್ಚಿನಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಸವದಿ ಚಾಲನೆ

ಲೋಕದರ್ಶನ ವರದಿ 


ಅಥಣಿ 03: ಗಚ್ಚಿನ ಮಠದ ಶಿವಯೋಗಿಗಳ ಶತಮಾನೋತ್ಸವವನ್ನು ಮಾದರಿಯಾಗಿ ಆಚರಿಸೋಣ, ಭಕ್ತರು ಸಹಾಯ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.  

ಅವರು ಗಚ್ಚಿನ ಮಠದಲ್ಲಿ ಹಮ್ಮಿಕೊಂಡ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

           ಏ.17 ರಿಂದ ಮೇ.17 ರ ವರೆಗೆ ಬಸವಪುರಾಣ, ವಚನಮೇಳ, 100 ಮಠಾಧೀಶರ ಸಮಾವೇಶ, ಶಿವಯೋಗಿಗಳ ಜೀವನಚರಿತ್ರೆ ಬಿಡುಗಡೆ ಮತ್ತು ಅವರು ರಚಿಸಿದ ಪದ್ಯಗಳ ಸಿಡಿ ಬಿಡುಗಡೆ, ಶತಮಾನೋತ್ಸವ ಸೌಧ, ವಸತಿ ಸಮುಚ್ಚಯ ನಿರ್ಮಾಣಕ್ಕೆ ಚಾಲನೆ, ಅಥಣಿ ಪುರ​‍್ರವೇಶದಲ್ಲಿ ನಾಲ್ಕು ದಿಕ್ಕುಗಳಲ್ಲಿ ಮಾಹಾದ್ವಾರ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ ಅವರು ಮುರುಘಾ ಮಠದಿಂದ ಶತಮಾನೋತ್ಸವಕ್ಕಾಗಿ 25 ಲಕ್ಷ ನೀಡುವುದಾಗಿ ಹೇಳಿದರು. 

                ವಿಧಾನ ಪರಿಷತ್ ಸದಸ್ಯ  ಲಕ್ಷ್ಮಣ ಸವದಿ ಮಾತನಾಡಿ ನಾಡಿನಾದ್ಯಂತ ಗಚ್ಚಿನ ಮಠದ ಭಕ್ತರಿದ್ದಾರೆ, ಅವರೆಲ್ಲರನ್ನೂ ಸಂಪರ್ಕಿಸಿ ಅವರು ಶತಮಾನೋತ್ಸವಕ್ಕೆ ಬರುವಂತಾಗಬೇಕು, ಎಲ್ಲರೂ ಕೈ ಜೋಡಿಸಿ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದ ಅವರು ವಯಕ್ತಿಕವಾಗಿ ಗಚ್ಚಿನ ಮಠದ ಶತಮಾನೋತ್ಸವಕ್ಕಾಗಿ 25 ಲಕ್ಷ ಕೊಡುವುದಾಗಿ ಘೋಷಿಸಿದರು. 

           ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ನಾನು, ಸಂಸದ ಅಣ್ಣಾಸಾಬ ಜೊಲ್ಲೆ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ಅವರು ಸಿ ಎಂ ಬೊಮ್ಮಾಯಿ ಅವರನ್ನು ಭೆಟಿಯಾಗಿ ಗಚ್ಚಿನ ಮಠದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಮಂಜೂರಾತಿ ಪಡೆಯಲು ಪ್ರಯತ್ನಿಸುತ್ತೇವೆ ಎಂದರು. 

               ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ, ಇಂಗಳೇಶ್ವರ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಿವಬಸವ ಸ್ವಾಮೀಜಿ,, ಶೃಈಶೈಲ ನಾರಗೊಂಡ, ರಾವಸಾಬ ಐಹೊಳೆ, ಸಿದ್ಧಲಿಂಗ ದೇವರು, ಮಲ್ಲಿಕಾರ್ಜುನ ದೇವರು, ಜಿತೇಂದ್ರ ಸಿಂಗ ಶೇಖಾವತ ಇತರರು ಇದ್ದರು. 


ಸುದ್ದಿ ಓದಿ