ಕುಡಿಯುವ ನೀರಿನ ತೊಂದರೆ ಅನುದಾನ ಬಿಡುಗಡೆ: ಸಚಿವ ತಿಮ್ಮಾಪೂರ
ಜಮಖಂಡಿ: 28:ತಾಲೂಕಿನಲ್ಲಿ 28420 ಹೆಕ್ಟರ್ ಪ್ರದೇಶದಲ್ಲಿನ ವಾಣಿಜ್ಯ ಬೆಳೆ ಹಾನಿಯಾಗಿದ್ದು. ಕುಡಿಯುವ ನೀರಿನ ತೊಂದರೆ ನಿವಾರಿಸಲು ಜಿಲ್ಲಾಧಿಕಾರಿ ಖಾತೆಗೆ 25 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಬಕಾರಿ ಮತ್ತು ಜಿಲ್ಲಾಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ರಮಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬರ ಬಗ್ಗೆ ನಿಗಾವಹಿಸಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ, ಬರುವ ಜನವರಿ, ಫೆಬ್ರುವರಿ ತಿಂಗಳಿನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬರಬಹುದು. 4 ಮೇವು ಬ್ಯಾಂಕ್, ಕುಡಿಯುವ ನೀರಿನ ಬಗ್ಗೆ ನಿಗಾ ವಹಿಸಲಾಗುವುದು, ಕೂಲಿ ಕಾರ್ಮಿಕರಿಗೆ ಕೆಲಸ, ಪ್ರತಿ ವಾರಕ್ಕೊಮ್ಮೆ ಅಧಿಕಾರಿಗಳ ಸಭೆ ಕರೆಯಲು ಸೂಚನೆ ನೀಡಿದ್ದೆನೆ, ಶಾಲಾ ವಸತಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಾಗದಂತೆ ನಿಗಾವಹಿಸುವಂತೆ ತಿಳಿಸಿದ್ದೆನೆ ಎಂದರು.
ಬರವನ್ನು ಸಮರ್ಕವಾಗಿ ಎದುರಿಸಲು ಸರ್ಕಾರ ಸನ್ನದವಾಗಿದೆ, ಅನುದಾನ ಕೊರತೆಯೂ ಇಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಸಮಸ್ಯೆ ಉಂಟಾಗುತ್ತಿದೆ, ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ, ರಾಜ್ಯದಲ್ಲಿನ ಬರ ಬಗ್ಗೆ ಮನವಿ ಸ್ವೀಕರಿಸಿಕೊಳ್ಳಲು ಸಮಯ ನೀಡುತ್ತಿಲ್ಲ ಎಂದು ಆರೋಪಿಸಿದರು.
ನಾವು ಕೇಂದ್ರ ಸರ್ಕಾರಕ್ಕೆ ಬಿಕ್ಷೆ ಬೇಡುತ್ತಿಲ್ಲ ನಾವು ರೈತರ ಸಮಸ್ಯೆಗೆ ಸ್ಪಂದಿಸಲು ಅನೂದಾನ ಕೇಳುತಿದ್ದೆವೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೊರಣೆಯಿಂದ ನಮ್ಮ ರೈತರು ಹೈರಾನವಾಗುತ್ತಿದ್ದಾರೆ, ನಾವೇನು ಕೇಂದ್ರ ಸರ್ಕಾರಕ್ಕೆ ಬೀಕ್ಷೆ ಬೆಡುತ್ತಿಲ್ಲ ನಮಗೆ ನೀಡಬೇಕಾದ ಅನುದಾನ ನೀಡದೆ ನಿರ್ಲಕ್ಷ್ಯ ತಾಳುತಿದ್ದಾರೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಜಿಪಂ ಅಧಿಕಾರಿ ಆರ್.ಅಮರೇಶ ನಾಯಕ, ಅರ್ಜುನ ದಳವಾಯಿ, ಸಿದ್ದು ಮೀಶಿ, ರಫಿಕ ಬಾರಿಗಡ್ಡಿ, ತೌಪೀಕ ಪಾರ್ಥನಳ್ಳಿ, ಅಭಯ ನಾಂದ್ರೆಕರ, ಬಿ.ಜಿ.ಪಾಟೀಲ, ಬಸವರಾಜ ಹರಕಂಗಿ, ರೋಹಿತ ಸೂರ್ಯವಂಶಿ, ಶಂಕರ ಕಾಂಬಳೆ, ಅಬುಬಕರ ಕುಡಚಿ ಸೇರಿದಂತೆ ಅನೇಕರು ಇದ್ದರು. ಜಮಖಂಡಿ ನಗರದ ರಮಾ ನಿವಾಸದಲ್ಲಿ ಸುದ್ದಿಗಾರೊಂದಿಗೆ ಜಿಲ್ಲಾಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡುತ್ತಿರುವದು.