ಸಮಾಜದ ಬದಲಾವಣೆಗೆ ನಾಟಕ ಅಗತ್ಯ: ಮೋಹನ್ ರೆಡ್ಡಿ
ಹೂವಿನ ಹಡಗಲಿ 17: ನಾಟಕ ಮನೋರಂಜನೆಗೆ ಸೀಮಿತವಾಗದೇ ಸಾಮಾಜಿಕ ಬದಲಾವಣೆಗೆ ಪೂರಕವಾಗುವ ಕಲೆ.ಸಾಹಿತ್ಯ .ಸಂಸ್ಕ್ರತಿಯಾಗಬೇಕಿದೆ ಎಂದು ಜಿ ಬಿ ಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರೆಡ್ಡಿ ಅಭಿಪ್ರಾಯಪಟ್ಟರು.ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಭಾನುವಾರ ರಂಗಭಾರತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕವಿ ಶಿಕ್ಷಕ ಮುಂಡರಗಿ ನಿಂಗು ಸೊಲಗಿ ರಚಿತ "ದಾಂಪತ್ಯ ಗೀತ" ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಸಾಹಿತ್ಯ ರಂಗಭೂಮಿ ಬೆಳೆಸಲು ಎಂ ಪಿ ಪ್ರಕಾಶ್ ಸಾಕಷ್ಟು ಶ್ರಮಿಸಿದ್ದಾರೆ.
ನಾಟಕ - ಪರಂಪರೆ ಮುಂದುವರೆಸಿಕೊಂಡು - ಹೋಗುವ ಜವಾಬ್ದಾರಿ ಯುವಕರ ಮೇಲಿದೆ ಎಂದು ತಿಳಿಸಿದರು.ಆಧುನಿಕ ಯುಗದಲ್ಲಿ ಯುವ ಜನಾಂಗಕ್ಕೆ ಕಲೆ.ಸಾಹಿತ್ಯ ಬಗ್ಗೆ ಅರಿವು ಮೂಡಿಸಬೇಕು ಎಂದರು.ನಿವೃತ್ತ ಪ್ರಾಚಾರ್ಯ ಪ್ರೊ ಶಾಂತಮೂರ್ತಿ . ಬಿ ಕುಲಕರ್ಣಿ, ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್, ನಾಟಕಕಾರ ನಿಂಗು - ಸೊಲಗಿ, ಡಾ ಶಿವಕುಮಾರ್ ಬಿ, ನಿವೃತ್ತ ಮುಖ್ಯಗುರು ಕೆ ಚಂದ್ರೇಗೌಡ ಇತರರುಉಪಸ್ಥಿತರಿದ್ದರು.ಕ ಸಾ ಪ ಅಧ್ಯಕ್ಷ ಟಿ ಪಿ . ವೀರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ್ ರಾಮದುರ್ಗ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ಜನಮನ ಸೆಳೆಯಿತು. ರಂಗಪ್ರಸ್ತುತಿ ಸಂಗಮ ಕಲಾತಂಡ ಬಾಗಲಕೋಟೆ, ಶ್ರೀಕಾಂತ್, ಅಕ್ಕಮ್ಮ ನವಲಗರಿ ದಂಪತಿಗಳ ಅಭಿನಯಿಸಿದರು. ನಾಟಕಕ್ಕೆ ರಾಘವ ಕಮ್ಮಾರಸಂಗೀತ ನಿರ್ದೇಶನ ಮಾಡಿದರು. ರಾಹುಲ್ ಸಂತೋಷರ ಬೆಳಕಿನ ನಿರ್ವಹಣೆ ನಾಟಕಕ್ಕೆ ಪೂರಕವಾಗಿತ್ತು.ಬಿ. ಯುವರಾಜಗೌಡ ಪ್ರಾರ್ಥಿಸಿದರು. ಶಿಕ್ಷಕರಾದಹೆಚ್.ಜಿ.ಪಾಟೀಲ್ ಸ್ವಾಗತಿಸಿದರು. ಡಾ.ಕೆ. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಂ.ಚನ್ನವೀರಸ್ವಾಮಿ, ಗಡ್ಡಿ ಶಿವಕುಮಾರ ನಿರ್ವಹಿಸಿದರು.