ಬಿಎಜೆಎಸ್ಎಸ್ ಶಿಕ್ಷಣ ವಿದ್ಯಾಲಯ: ಡಾ:ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ
ರಾಣೇಬೆನ್ನೂರು 7: ಸಮಾಜದಲ್ಲಿನ ಎಲ್ಲಾ ಸೇವೆಗಳಿಗಿಂತಲೂ ಶಿಕ್ಷಣ ನೀಡುವ ಸೇವೆ ಬಹುದೊಡ್ಡದು ಮತ್ತು ಪುಣ್ಯದ ಕಾರ್ಯವಾಗಿದೆ ಎಂದು ಗಾಯಿತ್ರಿ ಪ್ರೌಢಶಾಲೆಯ ಶೈಕ್ಷಣಿಕ ಸಲಹೆಗಾರ ಮಲ್ಲಿಕಾರ್ಜುನ ಅಂಗಡಿ ಹೇಳಿದರು. ಅವರು ಇಲ್ಲಿನ ಹಲಗೇರಿ ರಸ್ತೆಯ ಗಾಯಿತ್ರಿ ಆಲಯದಲ್ಲಿ ನಡೆದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ135ನೇ ಜನ್ಮ ದಿನೋತ್ಸವದ, ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಕರಿಗೆ ಸಮಾಜದಲ್ಲಿ ಸದಾ ಗೌರವ,ಮಾನ, ಸನ್ಮಾನ ಇದೆ. ಆದರೆ ನೀಡುವ ಶಿಕ್ಷಣ, ಪಡೆದ ವಿದ್ಯಾರ್ಥಿಗಳು ತಮ್ಮ ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ ಅಂತಹ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವ ಶಿಕ್ಷಕರು ಅತ್ಯಂತ ಪುಣ್ಯಶಾಲಿಗಳಾಗಿದ್ದಾರೆ ಎಂದರು. ಮತ್ತೋರ್ವ ಅತಿಥಿ ಕಾಲೇಜು ಗೌರವ ಪ್ರಾಧ್ಯಾಪಕ ಪ್ರೊ : ಹೆಚ್. ಎ.ಭಿಕ್ಷಾವರ್ತಿಮಠ ಅವರು ಮಾತನಾಡಿ, ಭವಿಷ್ಯದಲ್ಲಿ ಶಿಕ್ಷಕರಾಗಿ ಹೊರಹೊಮ್ಮುವ ಇಲ್ಲಿನ ಶಿಕ್ಷಣ ವಿದ್ಯಾರ್ಥಿಗಳು, ತಮ್ಮಿಂದ ಭವಿಷ್ಯವನ್ನು ರೂಪಿಸಿಕೊಳ್ಳುವ ಭವಿಷ್ಯದ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಶಿಕ್ಷಣ ನೀಡಬೇಕಾಗಿದೆ ಆ ನಿಟ್ಟಿನಲ್ಲಿ ಇಂದಿನಿಂದಲೇ ತಮ್ಮ ಅಧ್ಯಯನದಲ್ಲಿ ಪ್ರೀತಿ, ವಿಶ್ವಾಸ, ಮಮಕಾರ ಮತ್ತು ಮೌಲ್ಯಗಳ ವಿಚಾರಗಳನ್ನು ಅಳವಡಿಸಿಕೊಂಡು, ಹೊರಹೊಮ್ಮಬೇಕು. ದೇಶ ಕಂಡ ಮಹಾನ್ ತತ್ವಜ್ಞಾನಿ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ದೂರ ದೃಷ್ಟಿ ಮತ್ತು ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ : ಎಂ. ಎಂ. ಮೃತ್ಯುಂಜಯ ಅವರು, ಶಿಕ್ಷಣ ವಿದ್ಯಾಲಯವು ತನ್ನ ವಿದ್ಯಾರ್ಥಿಗಳಿಗೆ ಗುಣಮಟ್ಟದಮತ್ತು ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಹ ಶಿಕ್ಷಣವನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಗಳು, ಕಷ್ಟಪಟ್ಟು ಓದದೇ, ಇಷ್ಟಪಟ್ಟು ಓದಬೇಕು. ಶಿಕ್ಷಕರಾದವರು ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಮುಂದೆ, ತತ್ವಜ್ಞಾನಿ ಡಾ : ರಾಧಾಕೃಷ್ಣನ್ ಅವರು ಮಾದರಿಯಾಗಿದ್ದಾರೆ. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ನಾವು ಸಹ ಅವರಂತೆ ಏನಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಉಪ ಪ್ರಾಚಾರ್ಯ ಶಿವಕುಮಾರ್ ಬಿಸಲಳ್ಳಿ, ಸಹಾಯಕ ಪ್ರಾಧ್ಯಾಪಕ ಎ.ಶಂಕರ ನಾಯಕ್, ಪರಶುರಾಮ ಪವಾರ, ಡಾ : ಎಚ್. ಐ. ಬ್ಯಾಡಗಿ, ರಾಜೀವ್ ಕೆ.ಎಮ್., ಶ್ರೀಕಾಂತ್ ಗೌಡ ಶಿವಣ್ಣನವರ್, ವಂದನಾ ಪಿ.ಎನ್, ರಜನಿ ತಿಗರಿಯವರ, ಗ್ರಂಥಪಾಲಕಿ ವೀಣಾ, ದೈಹಿಕ ಶಿಕ್ಷಣ ನಿರ್ದೇಶಕ, ಅಭಿಷೇಕ್ ಅಡ್ಡೇರ, ಮುತ್ತುರಾಜ್ ಸಿದ್ದಣ್ಣನವರ್ ಮತ್ತು ಪೂಜಾ ಸೇರಿದಂತೆ, ಆಡಳಿತ ಮಂಡಳಿಯ ಸದಸ್ಯರು ಮತ್ತಿತರಗಣ್ಯರು ಶಿಕ್ಷಣ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಶಿಕ್ಷಣಾರ್ಥಿ ಕಾವೇರಿ ಸಂಗಡಿಗರು ಪ್ರಾರ್ಥಿಸಿದರು. ಭವ್ಯ ಹೊನ್ನಾಳಿ ಸ್ವಾಗತಿಸಿದರು. ಚನ್ನವೀರ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ರಮೇಶ್ ನಿರೂಪಿಸಿ, ನಂದಾ ವಂದಿಸಿದರು. ನಂತರ ಪ್ರಾಶಿಕ್ಷಣಾರ್ಥಿಗಳಿಂದ ನಡೆದ ವೈವಿಧ್ಯಮಯ, ಸಾಂಸ್ಕೃತಿ ಪ್ರತಿಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ. ಗಮನ ಸೆಳೆದವು.