ಗೋಮಾತಾ ಸಹಕಾರಿ ಸಂಘದ ನಿರ್ದೇಶಕರಾಗಿ ಡಾ.ಸಂಜಯ ನಾಯಕ
ರಾಣೇಬೆನ್ನೂರ 30: ನಗರದ ಕಾಮದೇನು ಗೋ ರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಂಜಯ್ ಮ. ನಾಯಕ ಅವರು, ಬೆಳಗಾವಿ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ಗೋ ಮಾತಾ ಸಹಕಾರ ಸಂಘ ನಿಯಮಿತದ, ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಮಾ. 29ರ ಬುಧವಾರ ನಡೆದ ಪದಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರು ಅಯ್ಕ್ ಕುರಿತು ನಡೆದ ಮಹತ್ವದ ಸಭೆಯಲ್ಲಿ ಡಾ.ಸಂಜಯ್ ಅವರು ನಿರ್ದೇಶಕರಾಗಿದ್ದಾರೆ. ಮೊದಲು ನಿರ್ದೇಶಕರಾಗಿದ್ದ ಜೀವನ್ ಕುಮಾರ, ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಹುಣಚಿರಾಯ ಮೋಟಗಿ ಆಯ್ಕೆಯಾದರು. ಇನ್ನುಳಿದಂತೆ ಮಧು ಸೋಧನರಾವ್ ಹೆಚ್. ಸಿ.ಸೋಮೆಶ ಪಿ. ಶೇಟ್, ಸೈಲೇಶ್ ಹೊಳ್ಳ ಆಶಾಪ್ರಭು,ಸಹನಾ ಹೆಗಡೆ,ಡಾ:ಸಂಜಯ್ ಮ. ನಾಯ್ಕ, ಮುರಿಗೆಪ್ಪಕುಂದರಗಿ,ಸಿದ್ದಯ್ಯ ಹಿರೇಮಠ್,ಹುಣಚಿರಾಯ ಮೋಟಗಿ,ಜೈ ಭೀಮ ಸೋಲಾಪೂರ,ಸುರೇಶ ಬುರಟ್ ಇವರುಗಳು ಅಯ್ಕಗೊಂಡವರಾಗಿದ್ದಾರೆ. ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.