ಧಾರವಾಡ - ಹುಬ್ಬಳ್ಳಿ

ಡಾ. ಎಸ್‌.ಆರ್‌.ಗುಂಜಾಳರ 93ನೇ ಜನ್ಮದಿನೋತ್ಸವ: ಸನ್ಮಾನ

ಡಾ. ಎಸ್‌.ಆರ್‌.ಗುಂಜಾಳರ 93ನೇ ಜನ್ಮದಿನೋತ್ಸವ: ಸನ್ಮಾನ

ಹುಬ್ಬಳ್ಳಿ 29: ನಾಡಿನ ಖ್ಯಾತ ಗ್ರಂಥಪಾಲಕ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಗ್ರಂಥಾಲಯದ ಅಭಿವೃದ್ಧ್ದಿಗೆ ಶ್ರೇಷ್ಠ ಕೊಡುಗೆ ನೀಡಿದ ಹಿರಿಯ ಸಾಹಿತಿ ಡಾ. ಎಸ್‌.ಆರ್‌.ಗುಂಜಾಳ ಅವರ 93ನೇ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ ಹಾಗೂ ಡಾ. ಎಸ್‌.ಆರ್‌.ಗುಂಜಾಳರ ಬಸವಸೇವೆ ಎಂಬ ಗ್ರಂಥದ ಲೇಖಕರು, ಶರಣ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ  ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವದಿಂದ  ಆತ್ಮೀಯವಾಗಿ ಸನ್ಮಾನಿಸಿದರು. ಶುಭ ಕೋರಿದರು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಿರಿಯ ಸಾಹಿತಿ ರಂಜಾನ ದರ್ಗಾ, ಪ್ರಾಚಾರ್ಯ ಡಾ. ಮಹೇಶ ಡಿ. ಹೊರಕೇರಿ, ಬಸವ ಟಿವಿಯ ವ್ಯವಸ್ಥಾಪಕ ನಿರ್ಧೇಶಕ ಈ ಕೃಷ್ಣಪ್ಪ, ಹಿರಿಯ ನ್ಯಾಯವಾದಿ ಕೆ.ಎಸ್‌.ಕೋರಿಶೆಟ್ಟರ,  ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಡಾ. ಜಿನದತ್ತ ಹಡಗಲಿ,  ವೀರಣ್ಣ ಒಡ್ಡೀನ, ಎಂ.ಜಿ.ಮುಲಕರ, ಬೈಲಹೊಂಗಲದ ಸಾಹಿತಿ ಮೋಹನ ಪಾಟೀಲ, ಸಿದ್ದಯ್ಯ ಹಿರೇಮಠ,  ಗೀರೀಶ, ಮುಂತಾದವರು ಇದ್ದರು. 


ಸುದ್ದಿ ಓದಿ