ಕಾಗವಾಡ

ಡಾ. ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ವರ್ಷಾಚರಣೆ

ಡಾ. ಪ್ರಭಾಕರ ಕೋರೆ  ಸೌಹಾರ್ದ ಸಹಕಾರಿ ವರ್ಷಾಚರಣೆ

ಕಾಗವಾಡ 08:  ಡಾ. ಪ್ರಭಾಕರ ಕೋರೆ ಇವರ ಕ್ರೆಡಿಟ್ ಸೌಹಾರ್ದ ಸಹಕಾರಿ, ಶಿರಗುಪ್ಪಿ ಶಾಖೆಯ ಪ್ರಥಮ ವರ್ಷಾಚರಣೆ ಕಾರ್ಯಕ್ರಮ ಜರುಗಿತು.

ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಿವಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಶಿರಗುಪ್ಪಿ ಶಾಖೆಯಲ್ಲಿ ಮಹಾಲಕ್ಷ್ಮೀ ಪ್ರತಿಮೆಗೆ ಪೂಜೆ ನೆರವೇರಿಸಿ ಜುಗೂಳ ಗ್ರಾಮದ ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ನೆರವೇರಿದೆ. ಜುಗೂಳ ಗ್ರಾಪಂ ಉಪಾಧ್ಯಕ್ಷರಾಗಿ  ಈ ಶಾಖೆಯ ಸಂಚಾಲರಾದ ಕಾಕಾಸಾಹೇಬ ಪಾಟೀಲ ಇವರು ಚುನಾಯಿತಗೊಂಡಿದ್ದರಿಂದ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಶಾಖಾ ಸಮೀತಿ ಅಧ್ಯಕ್ಷ ಶಿವಗೌಡ ಪಾಟೀಲ ಮಾತನಾಡಿ, ಡಾ. ಪ್ರಭಾಕರ ಕೋರೆ ಇವರು ಈಗಾಗಲೇ ಶಿಕ್ಷಣ, ಆರೋಗ್ಯ ರಂಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅವರ ಹೆಸರಿನಿಂದ ಪ್ರಾರಂಭಿಸಿದ್ದ ಕ್ರೆಡಿಟ್ ಸಂಸ್ಥೆಯು ರಾಜ್ಯದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆಯೆಂದರು.

ಶಿರಗುಪ್ಪಿ ಶಾಖೆಯಲ್ಲಿ 3.18 ಕೋಟಿ ಠೇವಣಿ ಹಣ ಸಂಗ್ರಹಿಸಿ 85.15 ಲಕ್ಷ ರೂ. ಸಾಲ ವಿತರಿಸಿದ್ದಾರೆ. ಅಹ್ವಾಲ್ ವರ್ಷದಲ್ಲಿ 13.25 ಕೋಟಿ ರೂ. ವಾರ್ಷಿಕ ವ್ಯವಹಾರ ನೆರವೇರಿಸಿದೆ. 5.78 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಶಾಖೆಯಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಡಿ.ಡಿ., ಆರ್.ಟಿ.ಜಿ.ಎಸ್, ಎನ್.ಇ.ಎಫ್.ಟಿ, ಸೇವೆ ಪ್ರಾರಂಭಿಸಲಾಗಿದೆಯೆಂದು ಶಾಖೆಯ ವ್ಯವಸ್ಥಾಪಕ ಡಿ.ಎಸ್.ಕರೋಶಿ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಶಿರಗುಪ್ಪಿ ಸಲಹಾ ಸಮೀತಿ ಸದಸ್ಯರಾದ ನಾಗೇಂದ್ರ ಪಾಟೀಲ, ಪ್ರಶಾಂತ ಚೌಗುಲೆ, ದತ್ತಾತ್ರಯ ಧಾರವಾಡೆ, ಕಾಕಾಸಾಬ ಪಾಟೀಲ, ಕಿರಣ ಪಾಟೀಲ, ಮಧುಕರ ಬಾಡಗೆ, ನಾರಾಯಣ ದಾಬಡೆ, ದಾದಾಸಾಬ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ