ಡಾ. ನೇರ್ಲಿ ಕಾಳಜಿ ಕೇಂದ್ರಲ್ಲಿರುವ ಸಂತ್ರಸ್ತರ ಭೇಟಿ,ಸಾಂತ್ವನ
ಅಥಣಿ 03: ತಾಲೂಕಿನ ಜನವಾಡ ಗ್ರಾಮದಲ್ಲಿ ಕೃಷ್ಣಾ ನದಿಗೆ ಬಂದಿರುವ ಮಾಹಾಪೂರದಿಂದಾಗಿ ಮನೆ ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರನ್ನು ಚಿಕ್ಕೋಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ನೀರು ಬಂದಿರುವ ಪರಿಣಾಮ ಮನೆಯಲ್ಲಿರುವ ದನ ಕರುಗಳನ್ನು, ಹೊಲಗದ್ದೆಗಳನ್ನು, ಸಾಮಾನುಗಳನ್ನು ಕಾಳು ಕಡಿ, ವಸ್ತುಗಳನ್ನು ಕಳೆದುಕೊಂಡು ಕಾಳಜಿ ಕೇಂದ್ರಕ್ಕೆ ಬಂದ ಸಂತ್ರಸ್ತರಿಗೆ ಸರಕಾರದಿಂದ ದೊರೆಯಬಹುದಾದ ಸಹಾಯವನ್ನು ಧನ ಕೊಡಿಸುವ ಮತ್ತು ಮುಳುಗಡೆಗೆ ಒಳಗಾಗಿರುವ ಮನೆಗಳಿಗೆ ಒಂದು ಸರಿಯಾದ ವ್ಯವಸ್ಥೆ ಕಲ್ಪಿಸಿ ಜನರಿಗೆ ಆಶ್ರಯ ದೊರಕಿಸುವಂತೆ ಸರಕಾರದ ಸ್ಥರದಲ್ಲಿ ಒತ್ತಾಯಿಸುವುದಾಗಿ ಹೇಳಿದ ಅವರು ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರವಿ ಸಂಕ, ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ದೀಪಕ ಪಾಟೀಲ, ಸಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಪ್ರಸಾದ ಪಚಂಡಿ, ಯಲ್ಲಪ್ಪ ಘಡಕರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.