ನಾಳೆಯಿಂದ ಡಾ. ಮೂಜಗಂ ಟ್ರೋಫಿ 2020
ಘಟಪ್ರಭಾ ನವೆಂಬರ್ 05: ಪ್ರತಿ ವರ್ಷದಂತೆ ಈ ವರ್ಷ ವೃತಿ ನಿರತರಿಗಾಗಿ ಅನುಕಂಪ ಗ್ರುಪ್, ಶಿವರುದ್ರೇಶ್ವರ ಸೇವಾ ಸಮೀತಿ, ಕಾರ್ಯನಿರತ ಪತ್ರಕರ್ತರ ಸಂಘ, ಹಾಗೂ ಸಂಗಮ ಆಫ್ ಸೆಟ್ ಪ್ರಿಂಟರ್ಸ್ ಇವರ ಸಂಯುಕ್ತ ಆಶ್ರಯದಲ್ಲ್ಲಿ ಕರ್ನಾಟಕ ರಾಜ್ಯೋತ್ಸವ ಲಿಂಗೈಕ್ಯ ಡಾ. ಮೂಜಗಂ ಸ್ಮರಣಾರ್ಥಕವಾಗಿ 8ನೇ ಬಾರಿಗೆ ಏರ್ಪಡಿಸಿದ “ಡಾ. ಮೂಜಗಂ ಟ್ರೋಫಿ 2020” ಕ್ರಿಕೆಟ್ ಪಂದ್ಯಾವಳಿಯನ್ನು ಇಲ್ಲಿನ ಎಸ್ಡಿಟಿ ಶಾಲಾ ಮೈದಾನದಲ್ಲಿ ದಿ.07 ಮತ್ತು 08 ರಂದು ಹಮ್ಮಿಕೊಳ್ಳಲಾಗಿದೆ.
ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ, ವ್ಯಾಪಾರಸ್ಥರಿಗೆ ಹಾಗೂ ವೃತಿ ನಿರತ ಉದ್ಯೋಗಿಗಳಿಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಹಾಗೂ ಒತ್ತಡ ಮುಕ್ತವಾಗುವ ಸಲುವಾಗಿ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದ್ದು ಪಂದ್ಯಾವಳಿಯಲ್ಲಿ ಸ್ವಾಮೀಜಿಯವರ, ಪಟ್ಟಣ ಪಂಚಾಯತ, ಕಾರ್ಯನಿರತ ಪತ್ರಕರ್ತರು ಮತ್ತು ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಹೆಸ್ಕಾಂ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ, ರಾಜಕೀಯ ತಂಡ, ನ್ಯಾಯವಾದಿಗಳು ತಂಡ, ಗುತ್ತಿಗೆದಾರರು ತಂಡ, ವ್ಯಾಪರಸ್ಥರು, ವೈದ್ಯರು ಹಾಗೂ ಮೆಡಿಕಲ್, ಬ್ಯಾಂಕ ನೌಕರರು ಸೇರಿ 15 ತಂಡಗಳು ತುಂಬಾ ಆಸಕ್ತಿಯಿಂದ ಈ ಎರಡು ದಿನದ ಕ್ರಿಕೆಟ್ ಕಲರವದಲ್ಲಿ ಉತ್ಸವದಿಂದ ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ದಿ.7ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಅರಭಾವಿ ದುರುದುಂಡೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿಯವರು ಉದ್ಘಾಟಿಸಲಿದ್ದು ದಿ.8ರಂದು ಬಹುಮಾನ ವಿತರಣಾ ಸಮಾರಂಭದಲ್ಲಿ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಗೋಕಾಕ ತಾಲೂಕಿನ ಜನಪ್ರಿಯ ನಾಯಕರಾದ ಅಂಬಿರಾವ್ ಪಾಟೀಲ ಭಾಗವಹಿಸಲಿದ್ದಾರೆ. ಕ್ರಿಕೇಟ್ ಪಂದ್ಯಾವಳಿಗೆ ಆಕರ್ಷಕ ಟ್ರೋಫಿಯನ್ನು ಗುತ್ತಿಗೆದಾರರಾದ ಅರ್ಜುನ ಗಾಡಿವಡ್ಡರ ನೀಡಿದ್ದಾರೆ.