ಬೆಳೆಗಳಗೆ ಕೀಟಬಾಧೆ ರೈತರಿಗೆ ಡಾ. ಹೀನಾ ಮಾಹಿತಿ
ಇಂಡಿ: ಬೀನ್ಸ್, ಬದನೆ, ಪಪ್ಪಾಯ, ಮೆಣಸಿನಕಾಯಿ, ಕಾಳುಮೆಣಸು, ಆಲೂಗಡ್ಡೆ ಮತ್ತು ಸ್ಟ್ರಾಬೆರಿಯಂತಹ ಬೆಳೆಗಳನ್ನು ಕಪ್ಪು ನುಶಿ ಪೀಡೆಯಾಗಿದ್ದು ರೈತರು ಕೀಟಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸುವುದು ಅಥವಾ ಆಳವಾಗಿ ಗುಂಡಿತೋಡಿ ಹೂಳಬಹುದು ಎಂದು ಡಾ. ಹೀನಾ ಎಮ್.ಎಸ್. ವಿಜ್ಞಾನಿ (ತೋಟಗಾರಿಕೆ) ಹೇಳಿದರು.
ಬುಧವಾರ ತಾಲೂಕಿನ ತೆಗ್ಗೆಹಳ್ಳಿ ಗ್ರಾಮದ ವಿಠ್ಠಲ ಪೂಜಾರಿ ಅವರ ಹೊಲದಲ್ಲಿ ಮೆಣಸಿನಕಾಯಿ ಬೆಳೆಯುವ ರೈತರಿಗೆ ಮಾಹಿತಿ ತಿಳಿಸಿದರು.
ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ ಹೂಗಳ ಒಳಗೆ ಮತ್ತು ಹೊರಗಡೆ ಕಂಡುಬರುತ್ತದೆ. ಮರಿ ಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಅಂಚುಗಳ ಮೇಲ್ಮುಖವಾಗಿ ಮುದುಡುವುದು, ಹೂವುಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂ ಬಿಡದೆ ಒಣಗುವುದು ಎಂದರು.
ತಾಲೂಕಿನ ಸಾಲೋಟಗಿ, ಇಂಗಳಗಿ, ಆಳೂರ, ಅಗರಖೇಡ, ಹಿಂಗಣಿ, ಶಿರಶ್ಯಾಡ, ಗೋಳಸಾರ ಸೇರಿದಂತೆ ಅನೇಕ ಗ್ರಾಮದ ರೈತರ ಹೊಲಗಳಿಗೆ ಬೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ನಾವು ಹೇಳಿದಾಗೆ ರೈತರು ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದರು.
ಡಾ.ಅರ್ಜುನ ಸೂಲಗತ್ತಿ ವಿಜ್ಞಾನಿ (ಸಸ್ಯ ಸಂರಕ್ಷಣೆ) ಮಾತನಾಡಿ, ಪ್ರತಿಎಕರೆಗೆ 25-30 ನೀಲಿ ಅಂಟು ಬಲೆಗಳನ್ನು ಮೆಣಸಿನಕಾಯಿ ಬೆಳೆಯಲ್ಲಿ ನೇತು ಹಾಕಿ ಕೀಟಗಳನ್ನು ಆಕರ್ಷಿಸಿ ನಾಶಪಡಿಸಿಸುವುದು.
ಸಾವಯವ ಕ್ರಮವಾಗಿ ಬೇವಿನ ಬೀಜದಕಷಾಯ (ಶೇ.5) ಅಥವಾ ಶೇ. 3ರ ಬೇವಿನ ಎಣ್ಣೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಯಂತೆ ಬೆರೆಸಿ ಸಿಂಪಡಿಸಬಹುದು. ಹೊಂಗೆ ಎಣ್ಣೆಯನ್ನೂ ಸಹ ಪ್ರತಿ ಲೀಟರ್ ನೀರಿಗೆ 3 ಮಿ.ಲೀ. ಯಂತೆ ಬೆರೆಸಿ ಬಳಸಬಹುದು.
ಜೈವಿಕ ಕೀಟನಾಶಕಗಳಾದ ಬಿವೇರಿಯಾ ಬೆಝಿಯಾನಾ ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಸುಡೋಮೊನಾಸ್ ಫ್ಲೋರೋಸೆನ್ಸ್ ಪ್ರತಿ ಲೀಟರ್ ನೀರಿಗೆ 20 ಗ್ರಾಂ. ನಂತೆ ಬೆರೆಸಿ ಗಿಡವು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು.
ಕೀಟನಾಶಕಗಳನ್ನು ಹೂ ಲೇಪನದ ಒಳಗೆ ಸಿಂಪಡಿಸುವ ಮೂಲಕ ಕೀಟವನ್ನು ಸುಲಭವಾಗಿ ತಡೆಯಬಹುದು.
ಬೇವಿನ ಎಣ್ಣೆಯನ್ನು ಇತರೆ ಓಷಧಿಗಳೊಂದಿಗೆ ಬೆರೆಸಿ ಸಿಂಪಡಿಸಬೇಕು. ಇವುಗಳೊಂದಿಗೆ 0.5 ಗ್ರಾಂ. ಅಂಟು ಓಷಧವನ್ನು ಬೆರೆಸಿ ಸಿಂಪರಣೆ ಮಾಡಬೇಕು.
ಮೆಣಸಿನಕಾಯಿ ಬೆಳೆಯ ನಂತರ ಗೋವಿನ ಜೋಳ, ಜೋಳ, ಸಿರಿಧಾನ್ಯಗಳು, ಅಕ್ಕಡಿಕಾಳುಗಳು ಸ್ಥಳೀಯವಾಗಿ ಬೆಳೆಯುವ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ ಎಂದರು.
ಅನಪೇಕ್ಷಿತ ಕೀಟನಾಶಕಗಳನ್ನು ಬಳಸಬಾರದು ಹಾಗೂ ಕೇಂದ್ರೀಯ ಕೀಟನಾಶಕ ನೋಂದಣಿ ಮಂಡಳಿ ಸೂಚಿಸಿದ ಕೀಟನಾಶಕಗಳನ್ನು ಮಾತ್ರ ನಿರ್ವಹಣೆಗೆ ಬಳಸಬೇಕು ಎಂದರು.
ಈ ಸಂದರ್ಭದಲ್ಲಿ ವಿಠ್ಠಲ ಪೂಜಾರಿ, ಪುಂಡಲಿಕ ಪೂಜಾರಿ, ಶಿವಾನಂದ ಪೂಜಾರಿ, ಯಲಗೊಂಡ ಪೂಜಾರಿ ಸೇರಿದಂತೆ ಅನೇಕ ರೈತರು ಇದ್ದರು.