ಡಾ.ಫ. ಗು. ಹಳಕಟ್ಟಿ ಜನ್ಮದಿನ, ವಚನ ಸಂರಕ್ಷಣಾ ದಿನಾಚರಣೆ
ರಾಣೇಬೆನ್ನೂರು 06: ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ವಚನ ಸಾಹಿತ್ಯ ಸಮಾಜದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತನ್ನ ಪ್ರಭಾವ ಬೀರಿ ಹಳಕಟ್ಟೆ ಅವರ ಉದ್ದೇಶಿತ ಆಶಯ ಈಡೇರುವಲ್ಲಿ ಯಶಸ್ವಿಯಾಗಿದೆ ಎಂದು ಪ್ರೊ. ಮಾರುತಿ ಸಿಡ್ಲಾಪುರ್ ಹೇಳಿದರು.
ಅವರು ಇಲ್ಲಿನ ಎಸ್.ಜೆ. ಎಮ್ ವಿ ಮಹಿಳಾ ಮಹಾವಿದ್ಯಾಲಯದಲ್ಲಿ, ತಾಲೂಕ ಶರಣ ಸಾಹಿತ್ಯ ಪರಿಷತ್ತು, ತಾಲೂಕ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ,2023-24ನೇ ಸಾಲಿನ "ವಚನ ಚಿಂತನ " ಫ. ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಅವರ ಶ್ರಮ ಅಪಾರ, ವಚನಗಳಿಂದ ಜೀವನ ಮೌಲ್ಯಗಳು ಯಾವ ರೀತಿಯಲ್ಲಿ ಬದಲಾವಣೆಯಾಗುತ್ತದೆ ಎನ್ನುವುದನ್ನು ಅವರು ಅರಿತವರಾಗಿದ್ದರು. ರಾಜಕೀಯ, ಸಹಕಾರಿ ಕ್ಷೇತ್ರ ಅಲ್ಲದೆ ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿಯಾಗಿದ್ದರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ, ಕಾಲೇಜು ಪ್ರಾಚಾರ್ಯ ಡಾ : ಆರ್. ವಿ. ಹೆಗಡಾಳ ಅವರು ಇಂದಿನ ಯುವ ಸಮುದಾಯ ಮತ್ತು ವಿದ್ಯಾರ್ಥಿಗಳು ಡಾ: ಹಳಕಟ್ಟಿ ಅವರ ವಚನ ಸಂಗ್ರಹಿತ ಸಾಹಿತ್ಯವನ್ನು ಅತೀ ಸೂಕ್ಷ್ಮತೆಯಿಂದ ಅಧ್ಯಯನ ಮಾಡಬೇಕಾದ ಬಹು ಅಗತ್ಯವಿದೆ ಎಂದರು. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ:ಎಂ. ಆರ್. ಚಿದಾನಂದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗಣ್ಯರಾದ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ವರಿ ಬ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಶೈಲಜಾ ಕೋರಿಶೆಟ್ಟರ್, ಜೆ.ಎಂ.ಮಠದ, ಪ್ರಭಾಕರ್ ಶಿಗ್ಲಿ, ಎಲ್ಎಸ್ ಕರಿಗಾರ, ಎಂ.ಬಿ.ಮೋಟಳ್ಳಿ, ರಮೇಶ ಬಡ ಕರಿಯಪ್ಪನವರ್, ಪೂರ್ಣಿಮಾ ಬೆನ್ನೂರ್, ವೀಣಾ ಹೂದಿಗ್ಗೇರಿ, ನಾಗರತ್ನ ಗುಡಿಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು, ಉಪಾಧ್ಯಕ್ಷ ಎಸ್. ಕೆ. ನೆಸ್ವಿ, ಸ್ವಾಗತಿಸಿದರು. ಎಸ್ ಹೆಚ್ ಪಾಟೀಲ್ ನಿರೂಪಿಸಿ, ಚಂದನಾ ಬ್ಯಾಳಿ ವಂದಿಸಿದರು.