ಸಿಂಧಗಿ

ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ

ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ

ಸಿಂದಗಿ: ದೇಶಕ್ಕೆ ಅತ್ಯಂತ ಅಗತ್ಯವಾದ ಸೂಕ್ತವಾದ ವಿಶ್ವಶ್ರೇಷ್ಠ ಸಂವಿಧಾನ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಕೊಟ್ಟಿರುವುದನ್ನು ನಾವು ಎಂದೂ ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.  

ತಾಲೂಕಿನ ಮಲಘಾಣ ಗ್ರಾಮದಲ್ಲಿ ನಾಡೋಜ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಿದ್ದಲಿಂಗಯ್ಯ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪ್ರತಿಮೆ ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಲಘಾಣ ಗ್ರಾಮದಲ್ಲಿ ಶಾಸಕ ದಿ.ಎಂ.ಸಿ. ಮನಗೂಳಿ ಅವರು ಕೊಡಮಾಡಿದ ಅಂಬೇಡ್ಕರ್ ಪ್ರತಿಮೆ ಇಂದು ಅನಾವರಣಗೊಳಿಸುತ್ತಿದ್ದೇವೆ. ಎಂ.ಸಿ. ಮನಗೂಳಿ ಅವರು ನಮ್ಮೊಂದಿಗೆ ಇರಲಿಕ್ಕಿಲ್ಲ. ಅವರು ಮಾಡಿದ ಕಾರ್ಯಗಳು ನಮ್ಮೊಂದಿಗಿವೆ ಎಂದು ಹೇಳಿದರು. 

ಡಾ.ಬಿ.ಆರ್‌. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದಿದ್ದರೆ ನಾವು ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸ್ಥಾನಮಾನ ಪಡೆಯುತ್ತಿರಲಿಲ್ಲ. ಅವರು ನೀಡಿದ ಸಂವಿಧಾನದಿಂದ ನಾವು ಸ್ವತಂತ್ರವಾಗಿ ಉಸಿರಾಡಿಸಿ ಬದುಕು ಸಾಗಿಸುತ್ತಿದ್ದೇವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತಿದೆ. ಆದ್ದರಿಂದ ನಾನು ಮುಖ್ಯಮಂತ್ರಿಯಾಗಿದ್ದೆ ಎಂದು ಹೇಳಿದರು. 

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸಂವಿಧಾನದ ಬಗ್ಗೆ ಗೌರವವವಿಲ್ಲ. ಸಂವಿಧಾನದ ಅಡಿಯಲ್ಲಿ ಆಢಳಿತ ನಡೆಸುತ್ತಿಲ್ಲ. ಸಂವಿಧಾನ ವಿರೋರಾಧವಾಗಿ ನಡೆದರೆ ರಾಷ್ಟ್ರದ ಜನತೆಗೆ ಮಾಡಿದ ದ್ರೋಹ, ರಾುಟ್ರದ್ರೋಹವಾಗುತ್ತದೆ  ಎಂದು ಹೇಳಿದ ಅವರು ಡಾ.ಬಿ.ಆರ್‌. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. 

ನಾನು ಸಿಎಂ ಆಗಿದ್ದಾಗ ಸಂವಿಧಾನದ ಅಡಿಯಲ್ಲಿ 5 ವರ್ಷ ಸರಕಾರ ಆಢಳಿತ ನಡೆಸಿದ್ದು ಅದು ಕಾಂಗ್ರೆಸ್ ಪಕ್ಷ. ಸಮಾಜದ ಕಟ್ಟ ಕಡೆಯ ವ್ಯಕಿಗೂ ಸಮಾಜಿಕ ನ್ಯಾಯನೀಡಲಾಗಿದೆ. ದೇಶದಲ್ಲಿ ಬಡತನವಿದೆ. ಬವರು ಎರಡು ಹೊತ್ತು ಊಟ ಮಾಡಬೇಕು ಎಂದು ನಾನು ಪ್ರಮಾಣ ವಚನ ಸ್ವಿಕರಿಸಿದ ನಂತರ ಮೊದಲನೆಯದಾಗಿ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ನೀಡಿದ್ದು ಇತಿಹಾಸವಿದೆ. ಅಂಬೇಡ್ಕರ್, ವಾಲ್ಮಿಕಿ, ದೇವರಾಜರಸ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಿದ ಸಾಲವನ್ನು ಮನ್ನಾ ಮಾಡುವ ಎರಡನೇ ಕೆಲ ಮಾಡಿದ್ದೇನೆ ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂವಿಧಾನವನ್ನು ಗೌರವಿಸಿದ್ದೇವೆ ಎಂದು ಹೇಳಿದರು. 

ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಭನೆ ಎಂಬ ನಮ್ಮ ಮೂರು ಮಂತ್ರಗಳು ಎಂದು ರಾಜ್ಯದಲ್ಲಿ ಹೇಳುವ ಬಿಜೆಪಿ ಸರಕಾರ ಏನು ಮಾಡಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಏನು ಮಾಡಿದ್ದಾರೆ. ಅವರು ಸುಳ್ಳು ಹೇಲುವ ಮೂಲಕ ಆಢಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡಾ.ಬಿ.ಆರ್‌. ಅಂಬೇಡ್ಕರ ಪ್ರತಿಮೆಯನ್ನು ಅನಾವರಣಗೊಳಿಸಿದರು. 

ಕಲಬುರಗಿಯ ಸಿದ್ಧಾರ್ಥ ಬುದ್ದ ವಿಹಾರದ ಸಂತಬಂತೆಜಿ, ಆಸಂಗಿಹಾಳದ ಆರೂಢಮಠದ ಶಂಕರಾನಂದ ಮಹಾರಾಜರು, ಫಾದರ್ ಅಲ್ವಿನ್ ಅವರು ಸಾನಿಧ್ಯ ವಹಿಸಿದ್ದರು. ನೇತೃತ್ವ ವಹಿಸಿದ ವಾಯ್‌.ಸಿ. ಮಯೂರ, ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜಾಳ, ಮಾಜಿ ಸಚಿವರಾದ ಎಚ್‌. ಆಂಜನಯ್ಯ, ಎಚ್‌.ಸಿ. ಮಹಾದೇವಪ್ಪ, ಆರ್‌.ಬಿ. ತಿಮ್ಮಾಪೂರ, ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ, ಶಾಸಕರಾದ ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ಡಾ.ಅಜಯಸಿಂಗ, ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಕೆಪಿಸಿಸಿ ರಾಜ್ಯ ವಕ್ತಾರ ಎಸ್‌.ಎಂ. ಪಾಟೀಲ ಗಣಿಹಾರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಯುವ ಮುಖಂಡ ಅಶೋಕ ಮನಗೂಳಿ, ಎಂ.ಆರ್‌. ತಾಂಬೋಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಲ್ಲಮಪ್ರಭು ಪಾಟೀಲ, ಪ್ರಕಾಶ ರಾಠೋಡ, ಬಿ.ಎಸ್‌. ಪಾಟೀಲ ಯಾಳಗಿ, ರಾಜಶೇಖರ ಕೂಚಬಾಳ, ಯೋಗಪ್ಪಗೌಡ ಪಾಟೀಲ, ಗೋಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ವಿನಾಯಕ ಗುಣಸಾಗರ, ದಸ್ತಗೀರ ಮುಲ್ಲಾ, ಶಿವಾಜಿ ಮೇಟಗಾರ, ಜಿಪಂ ಮಾಜಿ ಅಧ್ಯಕ್ಷ ಸುಜಾತಾ ಕಳ್ಳಿಮನಿ, ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷ ವಿದ್ಯಾರಾಣಿ ತುಂಗಳ, ತಾಲೂಕಾ ಅಧ್ಯಕ್ಷೆ ಶಾರದಾ ಬೆಟಗೇರಿ, ಜಯಶ್ರೀ ಹದನೂರ, ಕಾಂತಾ ನಾಯಕ, ಮಹಾದೇವಿ ಬಮ್ಮಣ್ಣಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು. 


ಸುದ್ದಿ ಓದಿ