ಡಾ. ಬಿ.ಅರ್. ಅಂಬೇಡ್ಕರ್ರ 134 ನೇ ಜಯಂತಿಯೋತ್ಸವ
ಜಮಖಂಡಿ 23: ನಗರದ ಚಂದ್ರಗೀರಿ ಪೇಠದಲ್ಲಿ ಡಾ,ಬಿ,ಅರ್, ಅಂಬೇಡ್ಕರ್ ಅವರ 134 ನೇ ಜಯಂತಿಯೋತ್ಸವವನ್ನು ್ರ್ರಥಮ ಬಾರಿಗೆ ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಭವ್ಯವಾದ ಮೆರವಣಿಗೆಯನ್ನು ಮಾಡಲಾಯಿತು.
ಚಂದ್ರಗೀರಿ ಪೇಠದ ಹಿರಿಯ ಮುಖಂಡ, ಡಿ,ಎಸ್,ಎಸ್,ಭೀಮವಾದ ಜಿಲ್ಲಾ ಸಂಚಾಲಕ ಸುರೇಶ ನಡುವಿನಮನಿ ಅವರ ನೇತೃತ್ವದಲ್ಲಿ ಯವಕರ ತಂಡದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರೆ್ಣ ಮಾಡುವ ಮೂಲಕ ಪೂಜೆಯನ್ನು ಸಲಿಸಿದರು.
ಡಿ,ಎಸ್,ಎಸ್ ಭೀಮವಾದ ಜಿಲ್ಲಾ ಸಂಚಾಲಕ ಮುಖಂಡ ಸುರೇಶ ನಡುವಿನಮನಿ ಮಾತನಾಡಿ, 134 ವರ್ಷಗಳು ಗತಿಸಿದರು ಸಹ ಡಾ. ಆರ್,ಅಂಬೇಡ್ಕರ್ ಅವರ ಜಯಂತಿ ದಿನದಂದು ಅಂಬೇಡ್ಕರ್ ಸರ್ಕಲನಲ್ಲಿ ಅವರ ಪುತ್ಥಳಿಗೆ ಪೂಜೆಯನ್ನು ಸಲಿಸಿ. ಗೌರವ ನಮನಗಳನ್ನು ಸಲಿಸಲಾಗುತ್ತಿತ್ತು. ಆದರೆ ಡಾ. ಬಿ,ಆರ್,ಅಂಬೇಡ್ಕರ್ ಅವರ ಜಯಂತಿಯನ್ನು ಚಂದ್ರಗೀರಿ ಪೇಠದಲ್ಲಿ ಕೇವಲ ಭಾವಚಿತ್ರಕ್ಕೆ ಪೂಜೆಯನ್ನು ಸಲಿಸಲಾಗುತ್ತಿತ್ತು. ಇವಾಗ ನಮ್ಮ ನೇತೃತ್ವದಲ್ಲಿ ್ರ್ರಥಮ ಬಾರಿಗೆ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗಿದೆ. ಇದರಿಂದ ಮುಂದಿನ ಯುವಕರಿಗೆ ಪ್ರೇರಣೆ ಆಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಕೂಡಾ ಅಂಬೇಡ್ಕರ್ ಅವರ ಜಯಂತಿಯೋತ್ಸವವನ್ನು ಮಾಡಲಾಗುತ್ತಿದೆ ಎಂದರು.
ಚಂದ್ರಗೀರಿ ಪೇಠದಲ್ಲಿನ ಎಲ್ಲ ಯುವಕರನ್ನು ಒಂದು ಕೂಡಿಸಿ. ಸರಿಸುಮಾರು 3 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿ ಅದ್ದೂರಿಯಾಗಿ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಭವ್ಯವಾದ ಮೆರವಣಿಗೆಯನ್ನು ಮಾಡಲಾಗುತ್ತಿದೆ. ಸುಮಾರು ವರ್ಷಗಳ ಕಾಲ ಜಯಂತಿಯ ಆಚರಣೆಯನ್ನು ನಮ್ಮ ಚಂದ್ರಗೀರಿ ಪೇಠದಲ್ಲಿ ಮಾಡದೆ ಕೇವಲ ಭಾವಚಿತ್ರಕ್ಕೆ ಪೂಜೆಯನ್ನು ಸಲಿಸಲಾಗುತ್ತಿತ್ತು. ಇವಾಗ ಗಲ್ಲಿಯ ಯುವಕರ ಪ್ರೋತ್ಸಾಹದಿಂದ ಹಾಗೂ ಮುಂದಾಳತ್ವ ವಹಿಸಿಕೊಂಡು ಡಾ,ಬಿ,ಆರ್,ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವ ಜೊತೆಗೆ ಡಿಜೆ ಸೌಂಡ ಮೂಲಕ ಭವ್ಯವಾದ ಮೆರವಣಿಗೆಯನ್ನು ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜು ಮೇಲಿಕೇರಿ, ಈಶ್ವರ ವಾಳೇನ್ನವರ, ರಮೇಶ ನಡುವಿನಮನಿ, ವಿಲಾಸ ನಡುವಿನಮನಿ, ಶರಣು ಮೂಲಂಗಿ, ಅರುಣ ಹಾದಿಮನಿ, ರಾಮ ನಡುವಿನಮನಿ, ಪರಸು ಹಾದಿಮನಿ, ರಾಜು ಗಸ್ತಿ ಸೇರಿದಂತೆ ಅನೇಕರು ಇದ್ದರು. ಡಾ. ಬಿ,ಆರ್,ಅಂಬೇಡ್ಕರ್ ಅವರ ಮೂರ್ತಿಯ ಭವ್ಯವಾದ ಮೆರವಣಿಗೆ ಡಿಜೆ ಸೌಂಡದೊಂದಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿತು.