ಇಂಡಿ

ಡಾ.ಅಂಬೇಡ್ಕರ್ ತಮ್ಮ ಪ್ರತಿಭೆ ಪ್ರದರ್ಶಿಸಿ ಸಮಾಜ ಪರಿವರ್ತನೆ ಮಾಡಿದರು

ಡಾ.ಅಂಬೇಡ್ಕರ್  ತಮ್ಮ ಪ್ರತಿಭೆ ಪ್ರದರ್ಶಿಸಿ ಸಮಾಜ ಪರಿವರ್ತನೆ ಮಾಡಿದರು

ಲೋಕದರ್ಶನ ವರದಿ 

ಇಂಡಿ : ಡಾ. ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಸಾಕಷ್ಟು ನೋವುಗಳನ್ನು ಅನುಭವಿಸಿ, ತಮ್ಮ ಅಸಾಧಾರಣ ಪ್ರತಿಭೆ, ಪಾಂಡಿತ್ಯ, ಧೈರ್ಯದಿಂದ ಸಮಾಜ ಪರಿವರ್ತನೆ ಮಾಡಿದರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. 

ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಜರುಗಿದ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜಯಂತಿ ಕಾರ‌್ಯಕ್ರಮವನ್ನು ಉದ್ದೇಶಿ ಅವರು ಮಾತನಾಡಿದರು. 

ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ ಮಾತನಾಡಿ, ಸಮಾಜದಲ್ಲಾಗುತ್ತಿರುವ ಶೋಷಣೆ, ಅನ್ಯಾಯ, ಮೋಸ, ಅನೀತಿಗಳ ವಿರುದ್ಧ ತಮ್ಮ ಜೀವನ ಪಯಂರ್ತರವಾಗಿ ಹೋರಾಟ ಮಾಡಿ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ನ್ಯಾಯವನ್ನು ಒದಗಿಸಿಕೊಟ್ಟ ‘ಭಾರತದ ಭಾಗ್ಯವಿದಾತ’ರಾಗಿದ್ದಾರೆ ಎಂದು ಹೇಳಿದರು. 

ಕೆಬಿಎಸ್ ಶಾಲಾ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಜೀವನಾನುಭವ, ಅಧ್ಯಯನ ಮತ್ತು ಜ್ಞಾನವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಹೇಳಿದರು. 

ಶಿಕ್ಷಕರಾದ ಎಸ್‌.ಎಂ. ಪಂಚಮುಖಿ, ಎಸ್‌.ಆರ್‌. ಚಾಳೇಕಾರ, ಸುರೇಶ ದೊಡ್ಯಾಳಕರ, ಎಸ್‌.ಎನ್‌. ಡಂಗಿ, ಜೆ.ಸಿ. ಗುಣಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಜರುಗಿದ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜಯಂತಿ ಕಾರ‌್ಯಕ್ರಮವನ್ನು ಉದ್ದೇಶಿ ಸಂತೋಷ ಬಂಡೆ ಮಾತನಾಡಿದರು. 


ಸುದ್ದಿ ಓದಿ