ಡಾ.ಅಂಬೇಡ್ಕರ್- ಜಗಜೀವನ್ ರಾಮ್ ಮೆರವಣಿಗೆ
ರಾಣೇಬೆನ್ನೂರು 16: ಇಲ್ಲಿನ ಹರಳಯ್ಯ ನಗರದಲ್ಲಿ ರವಿವಾರ ಸಂಜೆ, ಸ್ಥಳೀಯ ದಲಿತ ಸಂಘರ್ಷ ಸಮಿತಿಯು, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ117ನೇ ಜಯಂತೋತ್ಸವ ಸಮಾರಂಭವು ಆಯೋಜಿಸಿತ್ತು. ಸಮಾರಂಭಕ್ಕೂ ಮುನ್ನ, ನಗರದಲ್ಲಿ ಭವ್ಯ ತೈಲ ಭಾವಚಿತ್ರಗಳ, ಜಯಂತೋತ್ಸವದ ಮೆರವಣಿಗೆ ಆಯೋಜಿಸಿದ್ದರು.
ಹರಳಯ್ಯ ನಗರದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರಾತ್ರಿ ಸಭಾ ವೇದಿಗೆ ಸಾಂಗತ್ಯಗೊಂಡು, ಸಭೆಯಾಗಿ ಮಾರ್ಪಟ್ಟಿದ್ದು. ಕಾರ್ಯಕ್ರಮದಲ್ಲಿ ಸಮುದಾಯದ ಹಲವಾರು ಗಣ್ಯರು, ಮುಖಂಡರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಗೆ ಡಿಜಿ ಸೌಂಡ್ ಸಿಸ್ಟಮ್, ಹಲಗೆ ವಾದ್ಯಗಳು, ಡೊಳ್ಳು ಸಮಾಳ, ಮೊದಲಾದ ಜಾನಪದ ವಾದ್ಯಗಳು ಮೆರಗು ನೀಡಿದ್ದವು.