ಮನೆ ಮನೆ ತೆರಳಿ ಮತಯಾಚನೆ
ಲೋಕದರ್ಶನ ವರದಿ
ರಾಣಿಬೆನ್ನೂರ 13: ರಾಜ್ಯದ ಜನತೆ ರಾಷ್ಟ್ರೀಯ ಪಕ್ಷಗಳ ಬಗ್ಗೆ ಭ್ರಮನಿರಶನಗೊಂಡಿದ್ದಾರೆ. ಈ ಬಾರಿ ಜಾತ್ಯಾತೀತ ಜನತಾದಳಕ್ಕೆ ಹೆಚ್ಚಿನ ಬೆಂಬಲ ಸೂಚಿಸಿದ್ದಾರೆ. ಈ ಬಾರಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
ಸಂದರ್ಭದಲ್ಲಿ ಚಳಗೇರಿ ಗ್ರಾಮದ ಮಾಲತೇಶ ಹೊನ್ನಕ್ಕಳವರ ಅವರನ್ನು ಎಸ್ಸಿ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಪತ್ರವನ್ನು ವಿತರಣೆ ಮಾಡಿದರು. ಮಹೇಶ ಹೊನ್ನಜ್ಜೇರ, ಸುಭಾಸಗೌಡ ರಾಮಲಿಂಗಣ್ಣನವರ, ಮೆಹಬೂಬಸಾಬ್ ಸೈಕಲ್ಗಾರ, ಸಿದ್ದಪ್ಪ ಗುಡಿಮುಂದ್ಲವರ, ಮಲ್ಲಿಕಾರ್ಜುನ ತೆಗ್ಗಿನ ಇದ್ದರು.