ಯರಗಟ್ಟಿ

ರಕ್ತದಾನವು ಎಲ್ಲ ದಾನಗಳಿಗಿಂತ ಶ್ರೇಷ್ಠ: ಮುರಘೇಂದ್ರಶ್ರೀ

ರಕ್ತದಾನವು ಎಲ್ಲ ದಾನಗಳಿಗಿಂತ ಶ್ರೇಷ್ಠ: ಮುರಘೇಂದ್ರಶ್ರೀ

ಲೋಕದರ್ಶನ ವರದಿ 

ಯರಗಟ್ಟಿ  22: ಜಿಲ್ಲಾ ಪಂಚಾಯತ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳು ಬೆಳಗಾವಿ  ತಾಲೂಕಾ ಆರೋಗ್ಯಾಧಿಕಾರಿಗಳು  ಸವದತ್ತಿ,  ಪ್ರಾಥಮಿಕ   ಆರೋಗ್ಯ ಕೇಂದ್ರ ಮುನವಳ್ಳಿ,   ಪುರಸಭೆ ಮುನವಳ್ಳಿ, ರಕ್ತ ಭಂಡಾರ ಭಿಮ್ಸ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ಮುವಳ್ಳಿಯ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು  ಏರಿ​‍್ಡಸಲಾಗಿತ್ತು.                                 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುನವಳ್ಳಿಯ  ಮುರಘೇಂದ್ರ  ಶ್ರೀಗಳು  ರಕ್ತದಾನವು ಎಲ್ಲ ದಾನಗಳಿಗಿಂತ ಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡಿದರೆ ಜೀವದಾನ ಮಾಡಿದಂತೆ. ಇದು  ಸಂಜೀವಿನಿ ಇದ್ದಂತೆ ಇದಕ್ಕೆ ಪರಾ​‍್ಯಯ ವ್ಯವಸ್ಥೆ ಇರುವದಿಲ್ಲಾ ಆದ್ದರಿಂದ ಎಲ್ಲರೂ ಇದರಲ್ಲಿ ಪಾಲ್ಗೊಂಡು ಸಾಮಾಜಿಕ ಸ್ವಾಸ್ಥ್ಯ ಕಾಪಾಡಿ  ಎಂದು ಹೇಳಿದರು.  

ವಿಶ್ವದಲ್ಲಿ ಪ್ರತಿ 2 ಸೆಂಕೆಂಡಿಗೊಮ್ಮೆ ರಕ್ತ ಬೇಕಾಗುವದು,  ನಮ್ಮ ಕರ್ನಾಟಕ ರಾಜ್ಯದಲ್ಲಿ 800 ರಿಂದ 1100 ಯುನಿಟ್ ದ ಅವಶ್ಯಕತೆ ಇದ್ದು ಶೆಕಡಾ 80 ರಷ್ಟು ಪೂರೈಕೆಯಾಗುತ್ತಿದ್ದು  ಶೇಕಡಾ 20 ರಷ್ಟು ಕೊರತೆ ಇದೆ, ರಕ್ತ ಕೊಟ್ಟ 24 ಗಂಟೆಯೊಳಗೆ ಹೊಸ  ರಕ್ತ ತಯಾರಾಗುವದು,  ಖಾಲಿ ಹೊಟ್ಟೆಯಲ್ಲಿ, ಜ್ವರವಿದ್ದಲ್ಲಿ, ಹೆಣ್ಣುಮಕ್ಕಳು ಮುಟ್ಟಿನ ಸಂಧರ್ಬದಲ್ಲಿ ರಕ್ತದಾನ ಮಾಡಬಾರದು, ರಕ್ತದಾನ ಮಢುವ ಮುನ್ನ ಅಪರಿಚತರೊಡನೆ ಲೈಂಗಿಕ ಸಂಪರ್ಕ ಮಾಡದೇ ಇರುವದು ಹಾಗೂ ಮದ್ಯಪಾನ ಮಾಡದೇ ಇರುವದಾಗಿದೆ  ಎಂದು ಪ್ರಾಸ್ತಾವಿಕವಾಗಿ  ಯರಗಟ್ಟಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಆಯ್‌. ಆರ್‌. ಗಂಜಿ  ಹೇಳಿದರು.                

ಹೆರಿಗೆ ಅಪಘಾತ,  ಶಸ್ತ್ರಚಿಕಿತ್ಸೆ,  ಕಾಯಿಲೆ, ಹುಟ್ಟಿನಿಂದ ಬಂದ ರಕ್ತದ ಕೊರತೆಹಿಇಂತಹ  ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವದು, 18 ರಿಂದ 60 ವರ್ಷ ದೊಳಗಿನವರು 45 ಕೆ,ಜಿ, ಗಿಂತ ಹೆಚ್ಚಿಗೆ ತೂಕವುಳ್ಳವರು, ರಕ್ತದ ಪ್ರಮಾಣ 12 ರಿಂದ 14 ಗ್ರಾಂ ಮೆಲ್ಪಟ್ಟವರು, ರಕ್ತ ದಾನ ಮಾಡಬಹುದು,  ರಕ್ತದಾನದಿಂದ ಹೊಸ ರಕ್ತದ ಉತ್ಪದನೆ ಯಾಗುವದು,  ಕಾರ‌್ಯತತ್ಪರತೆ,  ಜ್ಞಾಪಕಶಕ್ತಿ, ಹೆಚ್ಚಾಗುವದು, ರಕ್ತದಾನದಿಂದ ಕೊಬ್ಬಿನಾಂಶ ಕಡಿಮೆಯಾಗಿ ಯಾವದೇ ರೋಗ ಬರುವದಿಲ್ಲಾ ಹಾಗೂ ಹೃದಯಾಘಾತ ಕಡಿಯಾಗುವದು ಎಂದು ಅಧ್ಯಕ್ಷತೆ ವಹಿಸಿದ್ದ ಡಾ ಎಸ್ ಎಲ್ ದಂಡಗಿ  ಹೇಳಿದರು. 

ಶಿಬಿರದಲ್ಲಿ  ಮುರಘೇಂದ್ರ  ಮಹಾಸ್ವಾಮಿಗಳು  ಮುನವಳ್ಳಿ   ಇವರು ಶಿಬಿರದ ಉದ್ಘಾಟನೆ ಮಾಡಿದರು. ಡಾ ಎಸ್ ಎಲ್ ದಂಡಗಿ ಆಯುಷ್ಯ ವೈಧ್ಯಾಧಿಕಾರಿಗಳು ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಮುಖ್ಯಾಧಿಕಾರಿಗಳು  ರಮೇಶ ಹಿಟ್ಟಣಗಿ,  ಕಾಂಗ್ರೆಸ್ ಮುಖಂಡ ಉಮೇಶ ಬಾಳಿ,  ಶಾರದಾ  ಪಂಚನಗೌಡರ,  ಜ್ಯೋತಿ ಯಲಬುರ್ಗಿ,  ಅನುರಾಧ ಬೆಟಗೇರಿ, ಸುಭಾಸ ಹುಜರತ್ತಿ,  ಜಯಶೀಲ ಎನ್,  ಜೆಂಟ್ಸ್‌ ಗ್ರುಪ ಅಧ್ಯಕ್ಷರಾದ ಯಲ್ಲಪ್ಪ  ಪೂಜೇರ, ಮೇಘಾ ಎಸ್, ಅಬ್ದುಲ್ ಧಾರವಾಡ, ಮಂಜುನಾಥ ಜಡಗನ್ನವರ ಆಶಾ ಕಾರ‌್ಯಕರ್ತೆಯರು ಸಾರ್ವಜನಿಕರು ಪುರಭೆಯ  ಸಿಬ್ಬಂದಿಯವರು, ಆರೋಗ್ಯ ಇಲಾಖೆ ಸಿಬ್ಬಂದಿಯವರು,  ಇನ್‌ವಿಲ್ ಸ್ವ ಸಹಾಯ ಸಂಘದ  ಸದಸ್ಯರು, ಜೆಂಟ್ಸ್‌ ಗ್ರುಪ್ ಮುನವಳ್ಳಿ, ಮಹಾಲಕ್ಷ್ಮೀ ಮಹಿಳಾ ಸಂಘ ಸದಸ್ಯರು ಉಪಸ್ಥಿತರಿದ್ದರು. 

 ಸುಭಾಸ ಹುಜರತ್ತಿ  ಸ್ವಾಗತಿಸಿ, ವಿಶ್ವಾಸ ಹಿರೇಮಠ  ಕಾರ್ಯಕ್ರಮದ ನಿರೂಪಣೆ ಮಾಡಿ ಜಿ. ಎಲ್‌. ಭಂಡಾರಿ   ವಂದಿಸಿದರು. 


ಸುದ್ದಿ ಓದಿ