ಕಾಗವಾಡ

ದಾನದಲ್ಲಿ ಸಂಗ್ರಹಿತ ರಕ್ತ ಸೈನಿಕರಿಗೆ: ಭಮ್ಮಣ್ಣ ಚೌಗುಲೆ

ದಾನದಲ್ಲಿ ಸಂಗ್ರಹಿತ ರಕ್ತ ಸೈನಿಕರಿಗೆ: ಭಮ್ಮಣ್ಣ ಚೌಗುಲೆ
ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗುಲೆ ಇವರ ಪುಣ್ಯಸ್ಮರಣೆ ನಿಮಿತ್ಯ ಗಡಿಯಲ್ಲಿ ದೇಶ ಸೇವೆಗಾಗಿದ್ದ ಸೈನಿಕರಿಗಾಗಿ ಹಮ್ಮಿಕೊ

ಕಾಗವಾಡ 17: ತಾಲೂಕಿನ ಶಿರಗುಪ್ಪಿ ಗ್ರಾಮದ ಸಹಕಾರ ರತ್ನ ಜಿನ್ನಪ್ಪಣ್ಣಾ ಚೌಗುಲೆ ಇವರ 5ನೇ ಪುಣ್ಯಸ್ಮರಣೆ ನಿಮಿತ್ಯ ಲಾಲಬಹಾದ್ಧೂರ ಕೋ-ಆಪ್ ಸಂಸ್ಥೆ ವತಿಯಿಂದ ದಿ. 17ರಂದು ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 108 ಯುವಕರು ರಕ್ತದಾನ ಮಾಡಿದರು. ಈ ರಕ್ತವನ್ನು ಗಡಿಭಾಗದಲ್ಲಿ ದೇಶ ಸೇವೆ ಮಾಡುತ್ತಿರುವ ಸೈನಿಕರಿಗಾಗಿ ನೀಡುವ ಇಚ್ಛೆ ಸಂಸ್ಥೆಯ ಅಧ್ಯಕ್ಷ ಭಮ್ಮಣ್ಣ ಚೌಗುಲೆ ವ್ಯಕ್ತಪಡಿಸಿದರು.

ಅಥಣಿ ರಕ್ತ ಭಂಡಾರದ ಮುಖ್ಯಸ್ಥ ಮೆಹಬೂಬ ಮುಜಾವರ ಇವರ ನೇತೃತ್ವದಲ್ಲಿ ಅವರ ಸಿಬ್ಬಂದಿಗಳು ರಕ್ತ ಸಂಗ್ರಹ ಮಾಡಿದರು.

ಶಿರಗುಪ್ಪಿಯ ಖ್ಯಾತ ವೈದ್ಯರಾದ ಡಾ. ಮಹಾಧವಲ್ ಭೋಮಾಜ, ಚಿಕ್ಕೋಡಿಯ ದಿಯಾ ಆಸ್ಪತ್ರೆಯ ಡಾ. ಸಂಜಯ ಪಾಟೀಲ, ಯಡ್ಡೂರದ ಡಾ. ಕುಮಾರ ಚೌಗುಲೆ, ಶಿರಗುಪ್ಪಿಯ ಡಾ. ಅಮೋಲ ಸರಡೆ, ಡಾ. ರಾಜೇಂದ್ರ ಅಕಿವಾಟೆ, ಡಾ. ಸಂಜೀವ ಖೋತ, ಡಾ. ಅಶ್ವಿನಿ ಅಕಿವಾಟೆ, ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾಂಜಲಿ ಚೌಗುಲೆ, ನ್ಯಾಯವಾದಿ ಅಭಯಕುಮಾರ ಅಕಿವಾಟೆ ಇವರು ದಿ. ಜಿನ್ನಪ್ಪಣ್ಣಾ ಚೌಗುಲೆ ಇವರ ಪ್ರತಿಮೆಗೆ ಪೂಜೆ ಸಲ್ಲಿಸಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಲಾಲಬಹಾದ್ಧೂರ ಸಂಸ್ಥೆಯ ಅಧ್ಯಕ್ಷ ಭಮ್ಮಣ್ಣ ಚೌಗುಲೆ, ಸಂಚಾಲಕರಾದ ಮಹಾವೀರ ಕಾತ್ರಾಳೆ, ಭೀಮು ಭೋಲೆ, ಸುರೇಶ ಚೌಗುಲೆ, ಮ್ಯಾನೇಜರ ಅಜೀತ ನಾಂದಣಿ ಹಾಗೂ ಎಲ್ಲ ಸಂಚಾಲಕರು ಜಿನ್ನಪ್ಪಣ್ನ ಚೌಗುಲೆ ಅವರ ಅಭಿಮಾನಿಗಳು ರಕ್ತದಾನ ಶಿಬಿರ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ