ವಿದ್ಯಾರ್ಥಿಗಳು ಓದುವ ಛಲ ಬಿಡಬೇಡಿ -ಶಾಸಕ ಕೃಷ್ಣನಾಯ್ಕ
ಹೂವಿನಹಡಗಲಿ 16- ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಪುಸ್ತಕ ಓದುವ ಛಲ ಬಿಡಬೇಡಿ ಎಂದು ಶಾಸಕ ಕೃಷ್ಣನಾಯ್ಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹೂವಿನಹಡಗಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿಬಿಆರ್ ಕಾಲೇಜಿನಲ್ಲಿ ಶುಕ್ರವಾರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸರ್ಕಾರಿ ನೌಕರಿಗೆ ಓದುವುದಲ್ಲ, ತಮ್ಮ ಬದುಕನ್ನು ರೂಪಿಸಿಕೊಳ್ಳುವ ಜತೆಗೆ ಸ್ವಯಂ ಉದ್ಯೋಗವನ್ನು ಕಂಡು ಕೊಳ್ಳಬಹುದು ಎಂದ ಅವರು ಶಿಕ್ಷಣ,ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಉತ್ತರ ಕರ್ನಾಟಕ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿರುವುದರಿಂದ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನುದಾನವನ್ನು ಸರ್ಕಾರ ಕಲ್ಪಿಸಿದೆ.ಅಭಿವೃದ್ದಿಯಲ್ಲಿ ಸಮತೋಲನ ಮಾಡಲು ಶಿಕ್ಷಣ,ಆರೋಗ್ಯದಿಂದ ಮಾತ್ರ ಸಾಧ್ಯ ಜತೆಗೆ ಈ ಭಾಗದ ನಿರುದ್ಯೋಗಿ ಯುವಕರಿಗೆ ಗುಡಿಕೈಗಾರಿಕೆಗಳು,ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.
ಪ್ರಾಧ್ಯಾಪಕರಾದ ಡಾ.ಕೆ.ಸತೀಶ ಉತ್ತರ ಕರ್ನಾಟಕ ಅಭಿವೃದ್ದಿಒಯಲ್ಲಿ ಸ್ಥಿತಿಗತಿಗಳು ಕುರಿತು ಉಪನ್ಯಾಸ ನೀಡಿದರು.ಜಿಬಿಆರ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳಾದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಿ.ಸಿ.ಪಾಟೀಲ, ಮುದ್ದಿ ಸುರೇಶ,ಟಿ.ಎಸ್.ಗಿರಿಜಮ್ಮ, ಮೋಹನ ರೆಡ್ಡಿ, ಎಂ.ಪಿ.ಎಂ.ವೀರಭದ್ರಸ್ವಾಮಿ,ಕೆ.ಮುದಕಪ್ಪ,ಡಾ.ಅಟವಾಳಗಿ ಪ್ರಕಾಶ, ಪ್ರಾಚಾರ್ಯ ಎನ್.ಅಮರೇಗೌಡ ಎನ್.ಪಾಟೀಲ ಇದ್ದರು.ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ಶೈಲಾಜ ಕಾರ್ಯಕ್ರಮ ನೀರೂಪಿಸಿದರು.ಪ್ರಾಚಾರ್ಯ ಎಸ್.ಎಸ್.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.