ರಾಣೆಬೆನ್ನೂರ

ಸರಕಾರಿ ನೌಕರಿ ಎನ್ನುವ ಭ್ರಮೆ ಬೇಡ: ಮಂಜುನಾಥಗೌಡ

ಸರಕಾರಿ ನೌಕರಿ ಎನ್ನುವ ಭ್ರಮೆ ಬೇಡ:  ಮಂಜುನಾಥಗೌಡ

ರಾಣೆಬೆನ್ನೂರು: ಅ 13 ಆಳಾಗಿ ದುಡಿಯುವುದಕ್ಕಿಂತ ಸ್ವಯಂ ಉದ್ಯೋಗ, ಆರಂಭಿಸಿ ಸ್ವತಂತ್ರ ಅರಸನಾಗಿ ಬಾಳುವುದು ಬಹುಲೇಸು ಎನ್ನುವ ವಾಸ್ತವಿಕ ಸತ್ಯ ಗಾದೆ ಮಾತು ಇಂದು ಪ್ರಚಲಿತದಲ್ಲಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುನಾಥಗೌಡ ಎಂ. ಹೇಳಿದರು.  

ಮಾರುತಿ ನಗರ ವಲಯದ, ಕಾಳಿಕಾ ದೇವಿನಗರ.ಬೆಳಕು ಹೊಂಬೆಳಕು ಜ್ಞಾನ  ವಿಕಾಸ ಕೇಂದ್ರದಲ್ಲಿ ನಡೆದ ಸ್ವಯಂ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 

ಸರಕಾರಿ ನೌಕರಿ ಸಿಗುವುದು ಅಪರೂಪ ಅದೆಲ್ಲವೂ ಪೂರ್ವ ಜನ್ಮದ ಪುಣ್ಯದ ಫಲ. ನೌಕರಿ ಸಿಗುವ ಭ್ರಮೆ ಬೇಡ, ಸ್ವತಂತ್ರ ಉದ್ಯೋಗ ಮಾಡಲು ನೂರಾರು ದಾರಿಗಳಿವೆ. ದಾರಿ ಹುಡುಕಿದರೆ, ಸಿಕ್ಕೆ ಸಿಗುತ್ತದೆ ಅದಕ್ಕಾಗಿ, ಸಾಲ ಸೌಲಭ್ಯಗಳಿವೆ, ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಉದ್ಯೋಗ ಆರಂಭಿಸಲು ಮುಂದಾಗಬೇಕಾದ ಅಗತ್ಯವಿದೆ ಎಂದರು.          

ಸ್ವಯಂ ಉದ್ಯೋಗ ಅವಕಾಶಗಳು ಕುರಿತಂತೆ ಮಾತನಾಡಿದ ಹಾವೇರಿ ರುಡ್ ಶೆಡ್ಡ್‌ ಸಂಸ್ಥೆಯ ಶಾಂತಾ ಅವರು, ಸ್ವಾವಲಂಬಿ ಜೀವನಕ್ಕೆ ಸ್ವತಂತ್ರ ಅಗತ್ಯ ಮತ್ತು ಅನಿವಾರ್ಯ, ಉದ್ಯೋಗ ಮಾಡುವವರಿಗೆ ವಿವಿಧ ರೀತಿಯಲ್ಲಿ ಹುಡುಕಾಟ ಇಲ್ಲಿ ಬಹು ಮುಖ್ಯ, ಎಂದ, ರುಢ ಶೆಟ್, ವರ್ಷದುದ್ದಕ್ಕೂ ವಿವಿಧ ಉದ್ಯಮದಲ್ಲಿ, ತರಬೇತಿ ನೀಡುವ ನಾಡಿನ ಅತಿ ದೊಡ್ಡ ಸಂಸ್ಥೆ, ಇಲ್ಲಿ ತರಬೇತಿ, ತಾವು ಅರಸಿಕೊಂಡ ಉದ್ಯಮವನ್ನು ಸಂಪೂರ್ಣ ಯಶಸ್ವಿಯಾಗಲಿದೆ ಎಂದರು. ವೇದಿಕೆಯಲ್ಲಿ ವಲಯ ಮೇಲ್ವಿಚಾರಕಿ, ಲಕ್ಷ್ಮಿ, ಸಮನ್ವಯಾಧಿಕಾರಿ ಶೋಭಾ, ಸೇವಾ ಪ್ರತಿನಿಧಿ ವೀಣಾ ಮತ್ತು ಭೂಮಿಕಾ ಸೇರಿದಂತೆ ಕೇಂದ್ರದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. 

ಸುದ್ದಿ ಓದಿ