ಕೆಲವರ ತಪ್ಪಿಗೆ ಎಲ್ಲರನ್ನೂ ದೂರಕೂಡದು: ಚಾಲೆಂಜಿಂಗ್ ಸ್ಟಾರ್
ಬೆಂಗಳೂರು, ಆಗಸ್ಟ್ 31: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟ, ನಟಿಯರ ಕುರಿತು ತನಿಖೆ ನಡೆಯುತ್ತಿದೆ. ತಪ್ಪು ಮಾಡಿರುವವರ ಹೆಸರು ಹೊರಬರಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಇಷ್ಟು ವರ್ಷದ ಚಿತ್ರರಂಗದಲ್ಲಿ ನನ್ನ ಗಮನಕ್ಕೆ ಇದೆಲ್ಲ ಬಂದಿಲ್ಲ. ಅದೂ ಅಲ್ಲದೆ ಕೆಲವರ ತಪ್ಪಿಗೆ ಎಲ್ಲರನ್ನೂ ದೂರಕೂಡದು. ಒಂದು ಶಾಲೆಯಲ್ಲಿ ಎಲ್ಲ ಬಗೆಯ ವಿದ್ಯಾರ್ಥಿಗಳೂ ಇರ್ತಾರೆ. ಸ್ಯಾಂಡಲ್ ವುಡ್ ನಲ್ಲೂ ಹಾಗೇನೇ. ಎಲ್ಲರೂ ಡ್ರಗ್ಸ್ ಚಟ ಹೊಂದಿರುತ್ತಾರೆ ಎಂದು ಹೇಳು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು, ಡ್ರಗ್ಸ್ ಹಗರಣಕ್ಕೆ ಸಂಬಂಧಿಸಿ ಚಿರಂಜೀವಿ ಸರ್ಜಾ ಹೆಸರು ಪ್ರಸ್ತಾಪವಾಗಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆತ ನಮ್ಮನ್ನು ಅಗಲಿ 3 ತಿಂಗಳಾಗಿದೆ. ಸತ್ತವರು ಕೊಲೆಗಾರರೇ ಆಗಿದ್ದರೂ, ಅವರಿಗೆ ಶುಭವಾಗಲಿ ಅಂತ ಪುಣ್ಯತಿಥಿ ಮಾಡ್ತೀವಿ ಅಲ್ವಾ” ಎಂದು ದರ್ಶನ್ ಪ್ರಶ್ನಿಸಿದ್ದಾರೆ.