ರಾಣೆಬೆನ್ನೂರ

ಸೋತೆ ಎನಬೇಡ, ಸೋಲಿನಲ್ಲಿಯೂ ಗೆಲುವಿನ ನಗುವಿದೆ: .ಹೆಗಡಾಳ

ಸೋತೆ ಎನಬೇಡ, ಸೋಲಿನಲ್ಲಿಯೂ ಗೆಲುವಿನ ನಗುವಿದೆ: .ಹೆಗಡಾಳ

ಎಸ್‌.ಜಿ.ಎಂ.ವಿ.ಮಹಿಳಾ ಕಾಲೇಜು: ಮಹಿಳಾ ಚೆಸ್ ಪಂದ್ಯಾವಳಿ 

ರಾಣೇಬೆನ್ನೂರು 06: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ, ಶಿಕ್ಷಣದ ಜೊತೆ ಜೊತೆಗೆ, ಕಲೆ, ಸಾಹಿತ್ಯ,ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಲಲಿತ ಕಲೆಗಳನ್ನು  ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದು ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ, ನಾಗೇಂದ್ರರಾವ್ ಎಸ್‌. ಹೇಳಿದರು.          

ಅವರು ಮಂಗಳವಾರ ಇಲ್ಲಿನ ಎಸ್‌.ಜೆ.ಎಂ.ವ್ಹಿ.ಬಿ.ಎ.ಜೆ.ಎಸ್‌.ಎಸ್‌. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಶಿಮುಶ ಸಭಾಭವನದಲ್ಲಿ, ಮಹಿಳಾ ಮಹಾವಿದ್ಯಾಲಯ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ  “ಅಂತರ್ ಕಾಲೇಜು ಮಹಿಳಾ ಚೆಸ್ ಪಂದ್ಯಾವಳಿ ಹಾಗೂ ತಂಡದ ಆಯ್ಕೆ ಉದ್ಘಾಟನಾ ಸಮಾರಂಭ”ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಗೆಲುವಿಗೆ ಹಿಗ್ಗದೇ, ಸೋಲಿಗೆ ಕುಗ್ಗದೇ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಗೆಲುವನ್ನು ಸಾಧಿಸಲು ಸಾಧ್ಯವಾಗುವುದು ಎಂದರು.  

ಇನ್ನೋರ್ವ ಅತಿಥಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಕಿಯರ ಸಹಕಾರಿ ಸಂಘದ ಅಧ್ಯಕ್ಷ  ಎನ್‌.ಎಸ್‌.ರಾಮನಗೌಡರ, ಅವರು   ‘ಕ್ರೀಡೆ ಎಂಬುದು ಒಂದು ಪುರಾತನ ಚಟುವಟಿಕೆಯಾಗಿದ್ದು, ಅದರಲ್ಲಿ ಚೆಸ್ ಪಂದ್ಯಾವಳಿಯು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ಅವಲಂಭಿಸಿದೆ. ಹೀಗಾಗಿ ಭವಿಷತ್ತಿನ ಮಾನವ ಸಂಪನ್ಮೂಲಗಳಲ್ಲಿ ಮಹಿಳೆಯರ ಕ್ರೀಡಾ ಪಾಲ್ಗೊಳ್ಳುವಿಕೆಯು ದೇಶದ ಆಂತರಿಕ ಭದ್ರತೆ ಮತ್ತು ಬೆಳವಣ ಗೆಗೆ ಸಹಕಾರಿಯಾಗಿದೆ’ ಎಂದರು.ಡಾ.ಆರಿ​‍್ವ.ಹೆಗಡಾಳ, ಕಾಲೇಜು ಪ್ರಾಚಾರ್ಯ ಡಾ: ಆರ್‌. ವಿ. ಹೆಗಡಾಳ ಅವರು ಮಾತನಾಡಿ  ‘ಒಂದು ಸೋಲು ಹಲವು ಗೆಲುವುಗಳ ಸೋಪಾನವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಾವು ಸೋತು ಕ್ರೀಡೆ ಗೆಲ್ಲುವಂತೆ ಮಾಡುವುದು ಈ ಚೆಸ್ ಪಂದ್ಯಾವಳಿಯ ಮೂಲ ಸಾಧನವಾಗಿದೆ. ಪ್ರತಿಯೊಬ್ಬ ಆಟಗಾರರಲ್ಲಿ ಆದರ್ಶಯುತ ಕ್ರೀಡಾ ಮೌಲ್ಯಗಳು ಪ್ರಭಾವ ಬೀರಿದಾಗ ಮಾತ್ರ ಪ್ರತಿಯೊಂದು ಕ್ರೀಡೆಯ ಮೂಲ ಆಶೆಯಗಳು ಈಡೇರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಕ್ರೀಡಾ ಸ್ಪರ್ಧಿಗಳು ಮುನ್ನುಗ್ಗಬೇಕು ಎಂದು ಹೇಳಿದರು.   

ಮುಂಬೈ ಕರ್ನಾಟಕ ದೈಹಿಕ ಶಿಕ್ಷಣ ನಿರ್ದೇಶಕ .ಶಿವಪ್ರಸಾದ.ಎಲಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ಧರಿಸಿಕಿ  ಮಹೇಶ್ವರಿ, ಹುಬ್ಬಳ್ಳಿಯ  .ಟಿ.ಯುವರಾಜ್, ರಾಷ್ಟ್ರೀಯ ಚೆಸ್ ಆರ್ಬಿಟರ್,  ಕೃಷ್ಣ ಸಿಂಧೆ, ಚೆಸ್ ತೀಪುಗಾರ ಪ್ರೊ.ಬಿ.ಆರ್‌.ಡಮ್ಮಳ್ಳಿ, ಐ.ಕ್ಯೂ.ಎ.ಸಿ ಸಂಯೋಜಕರು, ಡಾ.ಎಂ.ರಾಜಶೇಖರ​‍್ಪ, ವಿದ್ಯಾರ್ಥಿ ಒಕ್ಕೂಟದ ಚೇರ್ಮನ್  ಪ್ರೊ.ಶಿವರಾಜಕುಮಾರ್‌.ಕೆ, ಸ್ವಾಗತಿಸಿ ಪ್ರಾಸ್ತಾಮಿಕವಾಗಿ ಮಾತನಾಡಿದರು. ಚೆಸ್ಸ್‌ ಕ್ರೀಡಾಕೂಟದಲ್ಲಿ ವಿವಿಧ ಕಾಲೇಜುಗಳ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ  ಹಾಗೂ ಮಹಾವಿದ್ಯಾಲಯದ  ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಗಂಗಾ.ಅಗಸನಹಳ್ಳಿ, ಪ್ರಾರ್ಥಿಸಿದರು. ರೂಪಾ.ಪಾಟೀಲ  ನಿರೂಪಿಸಿ,  ಡಾ.ಎಂ..ರಾಜಶೇಖರಪ್ಪ ವಂದಿಸಿದರು 


ಸುದ್ದಿ ಓದಿ