ಹಗರಿಬೊಮ್ಮನಹಳ್ಳಿ

ಅಕ್ರಮ, ಅಪರಾಧಗಳಲ್ಲಿ ದಲಿತರನ್ನು ಟಾರ್ಗೆಟ್ ಮಾಡಬೇಡಿ: ದೊಡ್ಡಬಸಪ್ಪ

ಅಕ್ರಮ, ಅಪರಾಧಗಳಲ್ಲಿ ದಲಿತರನ್ನು ಟಾರ್ಗೆಟ್ ಮಾಡಬೇಡಿ: ದೊಡ್ಡಬಸಪ್ಪ

ಹಗರಿಬೊಮ್ಮನಹಳ್ಳಿ 27: ಅಕ್ರಮ ಅಪರಾಧಗಳಲ್ಲಿ ಕೆಲ ಆರಕ್ಷಕರು ದಲಿತರನ್ನು ಬಿಂಬಿಸುತ್ತಿರುವುದನ್ನು ಮೊದಲು ನಿಲ್ಲಿಸಬೇಕು ಎಂದು ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಗದ್ದಿಕೇರಿ ದೊಡ್ಡಬಸಪ್ಪ ತಿಳಿಸಿದರು. 

ನಗರದ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿರುವ ಹಲವಾರು ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ದಲಿತರ ಬಗ್ಗೆ ಇರುವ  ನಿರ್ಲಕ್ಷ್ಯ ಮನೋಭಾವ  ಕೂಡಲೇ ದೂರಮಾಡಬೇಕು. ತಿಂಗಳಲ್ಲಿ ಒಂದು ದಿನಾಂಕದಂದು ದಲಿತರ ಸಮಸ್ಯೆಗಳನ್ನು ,ಕುಂದು ಕೊರತೆಗಳನ್ನು ಆಲಿಸಲು ಕುಂದುಕೊರತೆ ಸಭೆ ಅವಶ್ಯಕವಿದ್ದು. ಸಂಧರ್ಭಕ್ಕನುಗುಣವಾಗಿ ದಲಿತರಿಗೆ ರಕ್ಷಣೆ ಒದಗಿಸಬೇಕು ಎಂದರು.  

ಬ್ಯಾಲಾಳು ಗ್ರಾಮದಲ್ಲಿ ಮಟ್ಕಾ , ಅಕ್ರಮ ಮದ್ಯಮಾರಾಟ ಹಾವಳಿ ಏಥೇಚ್ಛವಾಗಿದ್ದು ಪೊಲೀಸ್ ಇಲಾಖೆ ಇದರತ್ತ ಗಮನಹರಿಸಬೇಕು,ಇದರಿಂದ ಗ್ರಾಮಸ್ಥರ , ದಲಿತರ ಮೇಲೆ ಆರ್ಥಿಕ ಹಾಗೂ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.  

ಪೂಜಾರ ಸಿದ್ದಪ್ಪ ಮಾತನಾಡಿ, ಸರಕಾರದ ವಿಷಯಗಳ ಮಾಹಿತಿ ಕೊರೆತೆಯಿಂದಾಗಿ ದಲಿತರಿಗೆ ಅನ್ಯಾಯವಾಗುತ್ತಿದೆ. ಗ್ರಾ.ಪಂ. ವ್ಯಾಪ್ತಿಯ ಹಣಕಾಸು ಯೋಜನೆ ದಲಿತರಿಗೆ ಸಮರ್ಪಕವಾಗಿ ವಿನಿಯೋಗವಾಗಲಿ ಎಂದು ತಿಳಿಸಿದರು. 

ಮುಖಂಡ ಮೈಲಾರಪ್ಪ ಮಾತನಾಡಿ ತೆಲುಗೋಳಿ ರಾಮೇಶ್ವರಬಂಡಿ ವ್ಯಾಪ್ತಿಯಲ್ಲಿ ದಲಿತರು ಮೃತರಾದರೆ ಹೂಳಲು ಸ್ಮಶಾನವಿಲ್ಲ, ಕೂಡಲೇ ಎರಡು ಗ್ರಾಮಗಳ ಮದ್ಯ ಒಂದು ಸ್ಮಶಾನ ಗುರುತುಪಡಿಸಿ.ಬಡವರಿಗೆ ಮರಳು ಸಮಸ್ಯೆ ಹೆಚ್ಚಾಗುತ್ತಿದೆ, ಕೂಡಲೇ ಬಂಡಿಯಲ್ಲಿ ಮರಳು ಸಾಗಾಟ ಮಾಡುವುದಕ್ಕೆ ಅವಕಾಶ ನೀಡಿ ಎಂದು ತಿಳಿಸಿದರು. 

ಠಾಣೆಯ ಸಿಪಿಐ ಮಂಜಣ್ಣ ಪ್ರತಿಕ್ರಿಯಿಸಿ, ದಲಿತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವುದಿಲ್ಲ. ತಪ್ಪುಗಳು ಮೇಲಿಂದ ಮೇಲೆ ಆದಾಗ ಕ್ರಮಕೈಗೊಳ್ಳತ್ತೇವೆ. ಉದ್ದೇಶಪೂರ್ವಕವಾಗಿ ಯಾವ ಪೊಲೀಸರು ಯಾರನ್ನು ಟಾರ್ಗೇಟ್ ಮಾಡುವುದಿಲ್ಲ. ಅಕ್ರಮ ಮರಳು ಸಾಗಿಸುವವರ ವಿರುದ್ದ ಕ್ರಮಕೈಗೊಳ್ಳುತ್ತೇವೆ. ಬಂಡಿಯಲ್ಲಿ ಮರಳು ಸಾಗಾಣೆ ಮಾಡುವ ವಿಷಯ ಕುರಿತು ತಹಶೀಲ್ದಾರರೊಂದಿಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಪ್ರೋಪೇಷನರಿ ಡಿವೈಎಸ್‌ಪಿ ಮಹಾಂತೇಶ್, ಪಿಎಸ್‌ಐ ಮಾರುತಿ, ದಲಿರ ಮುಖಂಡರಾದ ಯಡ್ರಾಮ್ಮನಹಳ್ಳಿ ಮರಿಯಪ್ಪ, ಕಾಳಿ ಬಸವರಾಜ, ಆನಂದೇವಹಳ್ಳಿ ಪ್ರಭಾಕರ, ಹೆಚ್‌.ದುರುಗಪ್ಪ, ಎ.ಕೆ.ರಾಮಣ್ಣ, ಕೆಚ್ಚಿನಬಂಡಿ ದುರುಗಪ್ಪ, ಮಾದೂರು ಮಹೇಶ, ಹರೇಗೊಂಡನಹಳ್ಳಿ ದುರುಗಪ್ಪ, ಮೋರಿಗೇರಿ ಮೈಲಾರ​‍್ಪ, ಹೇಮಂತ, ಬನ್ನಿಗೋಳ ಯಮನೂರ​‍್ಪ, ವಿಷ್ಣು, ಮರಿಸ್ವಾಮಿ, ಚಿಲುಗೋಡು ಮೈಲಪ್ಪ, ದೊಡ್ಡಬಸಪ್ಪ ಇತರರಿದ್ದರು. 


ಸುದ್ದಿ ಓದಿ