ಹೂವಿನ ಹಡಗಲಿ

ಸೈಕಲ್ ಷಾಪ್ ಮಗನಿಗೆ ಡಾಕ್ಟರೇಟ್ ಪದವಿ

ಸೈಕಲ್ ಷಾಪ್ ಮಗನಿಗೆ ಡಾಕ್ಟರೇಟ್ ಪದವಿ

ಹೂವಿನಹಡಗಲಿ 11 : ಪಟ್ಟಣದ ಬಡ ಮುಸ್ಲಿಂ ಸಮಾಜದ ಯಾದದಾದಾಹ ಯಾತ್ ಬಾವಾಜಿ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ದಿ ಅಧ್ಯಯನ ವಿಭಾಗದ ಸಂಶೋಧನೆಯ ವಿದ್ಯಾರ್ಥಿಯಾಗಿದ್ದು, ಅವರಿಗೆ ’ರೈತರ ಆತ್ಮಹತ್ಯೆಗೆ ಪ್ರಭುತ್ವದ ಪ್ರತಿಸ್ಪಂದನೆ” ಎಂಬ ವಿಷಯದ ಕುರಿತು ಕೈಗೊಂಡ ಅಧ್ಯಯನಕ್ಕಾಗಿ ಇತ್ತೀಚೆಗೆ ಪಿಎಚ್‌.ಡಿ ಪದವಿ ಘೋಷಿಸಿದೆ. 

ಜನವರಿ 10ರಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ನುಡಿಹಬ್ಬದಲ್ಲಿ ಸನ್ಮಾನ್ಯ ರಾಜ್ಯಪಾಲರು ಇವರಿಗೆ ಪದವಿ ಪ್ರಧಾನ ಮಾಡಿದ್ದಾರೆ.ಇವರ  ಅಧ್ಯಯನಕ್ಕೆ ಜಿ.ಪಿ.ಪೋರವಾಲ ಕಲಾ, ವಾಣೀಜ್ಯ ಮತ್ತು ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯ, ಸಿಂಧಗಿಯ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ ರಾಠೋಡ್ ಅವರು ಮಾರ್ಗದರ್ಶನ ನೀಡಿದ್ದಾರೆ.  

ಪ್ರಸ್ತುತ ಸಂಶೋಧಕರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಮೂಲದವರಾಗಿದ್ದಾರೆ. ಇವರ ತಂದೆಯು ಜೀವನೋಪಾಯಕ್ಕೆ ಸೈಕಲ್ ಷಾಪ್‌ನ್ನು ಇಟ್ಟುಕೊಂಡಿದ್ದಾರೆ. ತಾವು ಪಿಎಚ್‌.ಡಿ ಅಧ್ಯಯನ ಕೈಗೊಳ್ಳಲು ತಮ್ಮ ತಂದೆಯ ಅತೀವ ಶಿಕ್ಷಣ ಪ್ರೇಮ, ಶ್ರಮ ಹಾಗೂ ತಾಯಿ ಮತ್ತು ತಂಗಿಯ ಪ್ರೋತ್ಸಾಹವೇ ಕಾರಣ ಎಂದು ಸ್ಮರಿಸಿಕೊಳ್ಳುತ್ತಾರೆ. 


ಸುದ್ದಿ ಓದಿ