ಯರಗಟ್ಟಿ

ಕತ್ತಲೆಯನ್ನು ಹೋಗಲಾಡಿಸುವ ಹಬ್ಬ ದೀಪಾವಳಿ: ಅಜಿತಕುಮಾರ ದೇಸಾಯಿ

ಕತ್ತಲೆಯನ್ನು ಹೋಗಲಾಡಿಸುವ ಹಬ್ಬ ದೀಪಾವಳಿ: ಅಜಿತಕುಮಾರ ದೇಸಾಯಿ

ಯರಗಟ್ಟಿ 27: ದೀಪಾವಳಿಯು ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಸಂಭ್ರಮಿಸುವಂತಹ ವಿಶೇಷ ಹಬ್ಬ ಎಂದು ಯರಗಟ್ಟಿ ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ ಹೇಳಿದರು. 

ತಲ್ಲೂರ ಗ್ರಾಮದಲ್ಲಿ ಬುಧವಾರ ಬಲಿಪಾಡ್ಯಮಿ ನಿಮಿತ್ಯ ನಡೆದ ಲಕ್ಷ್ಮೀಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂದರು. 

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಇಂದಿನ ದಿನಮಾನಗಳಲ್ಲಿ ಕೆಲವರು ಅಸತ್ಯದಿಂದ ಸತ್ಯದಕಡೆ ಕರೆದೊಯ್ಯವ ಬದಲು, ಸತ್ಯದಿಂದ ಸುಳ್ಳಿನ ಹಾದಿಗೆ ಕರೆದೊಯ್ಯುತ್ತಿದ್ದಾರೆ. ಮನುಷ್ಯ ಕತ್ತಲಿನಿಂದ ಬೆಳಕಿನಡೆಗೆ ಸಾಗಬೇಕು ವಿನಹ: ಬೆಳಕಿನಿಂದ ಕತ್ತಲಿನ ಕಡೆಗೆ ಸಾಗಬಾರದು. ಅಜ್ಞಾನಿಗಳ ಕಾರಣದಿಂದ ಸುಜ್ಞಾನಿಗಳ ಜ್ಞಾನ ಹಾಳಾಗುತ್ತಿದೆ ಎಂದರು. 

ನಂತರ ಮುತ್ತೈದೆಯರಿಗೆ ಭಕ್ತಿಯಿಂದ ಶ್ರೀಗಳು ಉಡಿತುಂಬಿವ ಕಾರ್ಯಕ್ರಮ ಜರುಗಿತು. ತೊರಗಲ್ಲಮಠದ ದೀಪಕ ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಸವದತ್ತಿ ಎಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಪಿಕೆಪಿಎಸ್ ಅಧ್ಯಕ್ಷ ಮಾರುದ್ರ​‍್ಪ ಉಪ್ಪಿನ, ಗ್ರಾಪಂ ಮಾಜಿ ಉಪಾದ್ಯಕ್ಷ ಬಾಬುಗೌಡ ಅಣ್ಣಿಗೇರಿ, ಚಂದ್ರ​‍್ಪ ಶಿವಪೂಜಿ, ಎ.ವಿ.ಇಂಗಳೆ, ಶಂಕರಗೌಡ ಪಾಟೀಲ, ಯಲ್ಲಪ್ಪ ನರಿ, ಬಸಪ್ಪ ನೇಗಿನಾಳ, ಕರೆಪ್ಪ ಪಟಾತ, ಮಹಾದೇವ ಶಿವಪೂಜಿ, ಸಚೀನ ಹೋಳಿ ಸೇರಿದಂತೆ ಸುಮಂಗಲೆಯರು ಇದ್ದರು. 


ಸುದ್ದಿ ಓದಿ