ರಾಣೆಬೆನ್ನೂರ

ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ 

 ರಾಣೇಬೆನ್ನೂರು : ಅ 28  ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಡಯಟ್ ಕಾರ್ಯಾಗಾರದ ಆವರಣದಲ್ಲಿ ಇತ್ತೀಚೆಗೆ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಜರುಗಿತು.  

 ಸ್ಪರ್ಧಾತ್ಮಕವಾಗಿ ನಡೆದ ನಾಟಕ ಸ್ಪರ್ಧೆಯಲ್ಲಿ 7ಜಿಲ್ಲೆಗಳ ಪ್ರೌಢಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  

 ಹಾವೇರಿ ಜಿಲ್ಲೆಯಿಂದ ಪ್ರತಿನಿಧಿಸಿದ ರಾಣೆಬೆನ್ನೂರು ನಗರದ ಕೆ. ಎಲ್‌. ಇ ಶಿಕ್ಷಣ ಸಂಸ್ಥೆಯ, ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಆರೋಗ್ಯ ಮತ್ತು ನೈರ್ಮಲ್ಯ  ವಿಷಯ ಕುರಿತು ಪ್ರದರ್ಶಿಸಿದ ನಾಟಕವು ದ್ವಿತೀಯ ಸ್ಥಾನವನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.  

        ನಾಟಕದ ಮೂಲಕ ಸಾಧನೆ ಮೆರೆದು  ಶಾಲೆಗೆ ಮತ್ತು ಶಿಕ್ಷಣ ಇಲಾಖೆಗೆ ಕೀರ್ತಿ ತಂದ ರಾಜೇಶ್ವರಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ್ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮ್ ಸುಂದರ ಅಡಿಗ, ಮತ್ತು ರಂಗ ನಿರ್ದೇಶಕ, ವೆಂಕಟೇಶ ಈಡಿಗರ, ಕೆಎಲ್‌ಇ  ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ವ್ಹಿ.ಪಿ. ಲಿಂಗನಗೌಡ್ರ ಉಪಪ್ರಾಚಾರ್ಯ ಪಿ.ಪ್ರಹ್ಲಾದ ಮತ್ತು ಅಧ್ಯಾಪಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.  

ಊ28-ಖಓಖ01-ನ್ಯೂಸ್‌. ಅಂಡ್‌. ಫೋಟೋ. 


ಸುದ್ದಿ ಓದಿ