ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ರಾಜ್ಯಮಟ್ಟಕ್ಕೆ ಆಯ್ಕೆ
ರಾಣೇಬೆನ್ನೂರು 7: ಇತ್ತೀಚೆಗೆ ಹಾವೇರಿಯ ನೆಹರು ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟವು ಆ ಸಂಖ್ಯಾತ ಕ್ರೀಡಾ ಪಟುಗಳ ಹಾಗೂ ಕ್ರಿಡಾಭಿಮಾನಿಗಳ ಮಧ್ಯ ನಡೆಯಿತು. ಭಾರಿ ಸ್ಪರ್ಧಾತ್ಮಕವಾಗಿ ನಡೆದ ವಿಭಾಗ ಮಟ್ಟದ ಈ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೊಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಎಂದಿನಂತೆ ತಮ್ಮ ಸಾಧನೆ ಮೆರೆದು ಜಿಲ್ಲೆಯ ರಾಣೇಬೆನ್ನೂರು ನಗರದ, ಕೆಎಲ್ಎ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೈಸೂರು ದಸರಾ ಮಹೋತ್ಸವದ ನಿಮಿತ್ತ ನಡೆಯುವ ದಸರಾ ಕಿಡಾಕೂಟದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ದಸರಾ ಕ್ರೀಡಾಕೂಟವು ಇದೇ ಅಕ್ಟೋಬರ್ 11ರ 2023 ರಂದು ಮೈಸೂರು ಮಹಾನಗರದಲ್ಲಿ ನಡೆಯಲಿದೆ. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ, ಪೂಜಾ ಪಾಟೀಲ, ಸುನೀತಾ ಗಟ್ಟಿ, ಅಶ್ವಿನಿ ಹಾದಿಮನಿ, ತಸ್ಲೀಮ್ ಬಾನು ಬಾವಿಕಟ್ಟಿ, ಹಾಗೂ ಪ್ರಿಯಾಂಕ ಅಸುಂಡಿ ಅವರುಗಳು ತಮ್ಮ ಸಾಧನೆ ಮೆರೆದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ, ಸಾಧಕ ವಿದ್ಯಾರ್ಥಿಗಳಿಗೆ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ, ವ್ಹಿ. ಪಿ.ಲಿಂಗನಗೌಡ್ರ, ಸದಸ್ಯರಾದ ಬಿ.ಎಸ್. ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಪ್ರಾಚಾರ್ಯ ಪ್ರೊ: ನಾರಾಯಣ ನಾಯಕ್ ಎ. ದೈಹಿಕ ಶಿಕ್ಷಣ ನಿರ್ದೇಶಕ ಮಂಜಪ್ಪ ಸಿ.ಎಸ್., ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ದೈಹಿಕ ಶಿಕ್ಷಕರು, ಪ್ರಾಧ್ಯಾಪಕರು ಸೇರಿದಂತೆ ಮತ್ತಿತರ ಗಣ್ಯರು ಕ್ರೀಡಾಪಟುಗಳು ಹಾರ್ದಿಕವಾದ ಅಭಿನಂದಿಸಿ, ರಾಜ್ಯ ಮಟ್ಟದಲ್ಲಿ ನಡೆಯುವ ದಸರಾ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ.