ಕಾಗವಾಡ

ಜಿಲ್ಲಾ ಮಟ್ಟದ ವಲಯ ಸಾಮಾಜಿಕ ಸಭೆ

ಜಿಲ್ಲಾ ಮಟ್ಟದ ವಲಯ ಸಾಮಾಜಿಕ ಸಭೆ
ಉಗಾರ ಲೈನ್ಸ್ ಕ್ಲಬ್ ಕಾರ್ಯಕ್ರಮದಲ್ಲಿ ದೇಶದಲ್ಲಿ ದಾಖಲೆ ಸೃಷ್ಠಿಸಿದ ಅಂಧ ವ್ಯಕ್ತಿ ಬಸವರಾಜ ಉಮ್ರಾಣಿ ಮಾಹಿತಿ ನೀಡುತ್ತಿ

ಕಾಗವಾಡ 22: ನಾನು ಸಂಪೂರ್ಣವಾಗಿ ಅಂಧತ್ವ ಹೊಂದಿದ್ದೇನೆ. ಅಂಧತ್ವ ಇದು ಶಾಪವಲ್ಲಾ. ನೀವು ನಮ್ಮ ಸೇವೆಗೆ ಪ್ರೋತ್ಸಾಹಿಸಿರಿ ಎಂದು ಹೇಳಿ, ಈಗಾಗಲೇ ಬೆಳಗಾವಿಯ ಮಹೇಶ್ವರಿ ಅಂಧ ವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ರಾಜ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೇನೆ ಎಂದು ಬಸರಾಜ ಉಮ್ರಾಣಿ ಹೇಳಿದರು.

ತಾಲೂಕಿನ ಉಗಾರ ಖುರ್ದ ಸಕ್ಕರೆ ಕಾರ್ಖಾನೆ ವಿಶ್ರಾಮ ಗೃಹ ಸಭಾ ಭವನದಲ್ಲಿ ಉಗಾರ ಲೈನ್ಸ್ ಕ್ಲಬ್ ವತಿಯಿಂದ ಬೆಳಗಾವಿ ಜಿಲ್ಲಾ ಮಟ್ಟದ ವಲಯ ಸಾಮಾಜಿಕ ಸಭೆ ಹಮ್ಮಿಕೊಳ್ಳಲಾಗಿತ್ತು.

ರವಿವಾರ ಸಂಜೆ ಉಗಾರದಲ್ಲಿ ಜರುಗಿರುವ ಲೈನ್ಸ್ ಕ್ಲಬ್ ಝೋನಲ್ ಮೀಟಿಂಗ್‍ದ ಮುಖ್ಯ ಅತಿಥಿಗಳಾಗಿ ದೇಶದಲ್ಲಿ ಅಂಧ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಿರುವ ಅಥಣಿಯ ಬಸರಾಜ ಉಮ್ರಾಣಿ ಆಗಮಿಸಿದ್ದರು.

ಲೈನ್ಸ್ ಕ್ಲಬ್‍ನ ಅಧ್ಯಕ್ಷ ಶಶಿಕಾಂತ ಜೋಶಿ, ಕಾರ್ಯದರ್ಶಿ ಸಚಿನ ಪೋತದಾರ, ಶ್ರೀಕಾಂತ ಭಟ್ಟ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಲಬ್ ಸಾಧನೆ ಬಗ್ಗೆ ಹೇಳಿಕೊಂಡರು. ಈ ಸಭೆಯಲ್ಲಿ ಗೋಕಾಕ ಕ್ಲಬ್ಬಿನ ವಿಶ್ವನಾಥ ಬೆಲ್ಲದ ಮತ್ತು ಬೆಳಗಾವಿ ಕ್ಲಬ್ಬಿನ ದೊಡಬಂಗಿ ಸೇರಿದಂತೆ ಲೈನ್ಸ್ ಸದಸ್ಯರು ಪಾಲ್ಗೊಂಡು ಮಾಹಿತಿ ನೀಡಿದರು.

ಕೋವಿಡ್ ಇದೇನು ಮಾರಕ ರೋಗವಲ್ಲಾ. ಅದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಇದನ್ನು ತಡೆಗಟ್ಟಲು ಸಾಧ್ಯವಿದೆ. ಇದೊಂದು ಕೋಲ್ರಾ, ಮಲೆರಿಯಾ ಕಾಯಿಲೆಯಂತಿದೆ ಎಂದು ಹೇಳಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಜಿ ಇವರನ್ನು ಭೇಟಿಯಾದಾಗ ನನ್ನ ಬಗ್ಗೆ ಸ್ಪೂರ್ತಿಯಿಂದ ಹೇಳುವಾಗ, ದೇಶದಲ್ಲಿಯ ಅಪರೂಪದ ವ್ಯಕ್ತಮತ್ವ ಎಂದರು. ಆಗ ನಾನು ದೇಶದ ಪ್ರಧಾನಿ ನೀವಾಗಿದ್ದು, ಇದೊಂದು ದೇಶದ ಜನತೆಗೆ ಹೆಮ್ಮೆಯೆಂದು ನಾನು ಹೇಳಿದ್ದೇನೆ ಎಂದು ಹೇಳಿದರು.

ಬಸವರಾಜ ಉಮ್ರಾಣಿ ಇವರು ಅಂಕೆ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಿ, ಲೈನ್ಸ್ ಕ್ಲಬ್ ಸದಸ್ಯರು ಹಾಗೂ ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳು ಮಂಡಿಸಿದ್ದರು. ಅದರಲ್ಲಿ ನೇರವಾಗಿ ಉತ್ತರ ನೀಡಿದರು. 10 ಸಾವಿರ ಮೊಬೈಲ್ ನಂಬರ ಅವರ ಸ್ಮರಣದಲ್ಲಿವೆ. ಈ ಸನ್ನಿವೇಶವನ್ನು ಕಂಡ ಅನೇಕರು ಆಶ್ಚರ್ಯ ವ್ಯಕ್ತಪಡಿಸಿ ಇದೊಂದು ದೈವಿ ಕೃಪೆಯೆಂದು ಹೇಳುತ್ತಿದ್ದರು.

ಕಾರ್ಯಕ್ರಮದಲ್ಲಿ ಲೈನ್ಸ್ ಕ್ಲಬ್ ಸದಸ್ಯರಾದ ಡಾ. ಎಸ್.ಎ.ಭರಮದೆ, ರಾಮಚಂದ್ರ ಕಿಲ್ಲೇದಾರ, ಜ್ಯೋತಿಕುಮಾರ ಪಾಟೀಲ, ಬಿ.ಬಿ.ಕಾಗೆ, ಜಗಧೀಶ ಪಟವರ್ಧನ, ಜಯೇಂದ್ರ ಸಾಟೆ, ಬಿ.ಎ.ಪಾಟೀಲ, ದೀಪಚಂದ ಶಹಾ, ಅಥರ್ವ ಶಹಾ, ರವೀಂದ್ರ ಗಾಣಿಗೇರ, ರಾಜೇಂದ್ರ ಪೋತದಾರ, ಅಮೃತಾ ಹೆಬ್ಬಾಳೆ, ಸೃಷ್ಠಿ ಸರಡೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ