ಧಾರವಾಡ - ಹುಬ್ಬಳ್ಳಿ

ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ

ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ

ಧಾರವಾಡ, 21:  ಜಿಲ್ಲಾ ಪಂಚಾಯತ್ ಧಾರವಾಡ, ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ್ ಮತ್ತು ಕಾಸ್ಮಾಸ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಟೇಬಲ್ ಟೆನಿಸ್ ಪಂದ್ಯಾವಳಿಯನ್ನು ಧಾರವಾಡದ ಕಾಸ್ಮಸ್ ಕ್ಲಬ್ಬಿನಲ್ಲಿ ನಡೆಸಲಾಯಿತು.  

ಕ್ವಾಸ್ಮಸ್ ಕ್ಲಬ್ಬಿನ ಅಧ್ಯಕ್ಷ ನೀತಿನ ಟಗರಪೂರ ಅವರು ಇಂದಿನ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿ, ಕಾರ್ಯಕ್ರಮದಲ್ಲಿ  ಮಕ್ಕಳನ್ನು ಉದ್ದೇಶಿಸಿ ವಿಜೇತರಾದ ಎಲ್ಲಾ ಮಕ್ಕಳಿಗೂ ಮುಂದೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಎಲ್ಲರೂ ಪದಕ ಗೆಲ್ಲುವಂತಾಗಲಿ ಹಾಗೆಯೇ ಎಲ್ಲಾ ತಂದೆ ತಾಯಂದಿರು ಮಕ್ಕಳಿಗೆ ಅಭ್ಯಾಸದ ಜೊತೆಗೆ ಕ್ರೀಡೆಗೆ ಹೆಚ್ಚಿನ ಮಹತ್ವವನ್ನ ನೀಡಬೇಕು ಹಾಗೆಯೇ ನಮ್ಮ ತಂದೆಯು ಅಂತರಾಷ್ಟ್ರೀಯ ಕ್ರಿಕೆಟಿಗರಾಗಿದ್ದರು ಎಂದು ನೆನಪಿಸಿಕೊಳ್ಳುತ್ತಾ ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳಿಗೆ ತಿಳಿಸಿದರು.  

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಎಲ್ಲ ಹಿರಿಯ ಶಿಕ್ಷಣಾಧಿಕಾರಿ ಅಶೋಕ್ ಸಿಂದಗಿ ಹಾಗೂ ವಿಷ್ಣು ಹೆಬವಿಷ್ಣು ಇವರು ಕೂಡ ಮಕ್ಕಳ ಉದ್ದೇಶಿಸಿ ನಮ್ಮ ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ತರಬೇತಿ ಸೌಲಭ್ಯವನ್ನು ನೀಡುವಲ್ಲಿ ಹೆಚ್ಚಿನ ಮುಥವರ್ಜಿಯನ್ನು ನಮ್ಮ ಇಲಾಖೆ ವಹಿಸುತ್ತದೆ ಎಂದು ಹೇಳಿದರು. ಎಲ್ಲ ಕಾರ್ಯಕ್ರಮದ ಉಸ್ತುವಾರಿಯನ್ನ ಶಾಂತಿ ಸದನ ಶಾಲೆಯ, ದೈಹಿಕ ಶಿಕ್ಷಕರಾದ ಶ್ರೀ. ಬಸವರಾಜ್ ಪಟ್ಟಣದವರ್ ಇವರು ಯಶಸ್ವಿಗೊಳಿಸಿದ್ದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೆಯೇ ವಿಜೇತರಾದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ ನೀಡಲು ವಿಜೇತರಾದ ಎಲ್ಲಾ ಮಕ್ಕಳಿಗೂ ಟ್ರೋಪಿಗಳನ್ನ ಮಾನ್ಯ ಉಚ್ಚ ನ್ಯಾಯಾಲಯದ ನೀಲಪ್ಪ ಬೋವೆರ್ ಮತ್ತು ಶೇಖರ ಪಾಟೀಲ ನೀಡಿದರು ಮತ್ತು ರಾಜೇಂದ್ರ ಪಾಟೀಲ್, ವ್ಯವಸ್ಥಾಪಕರು, ಕಾಸ್ಮಸ್ ಕ್ಲಬ್ ಹಾಗೂತಾಲೂಕ ದೈಹಿಕ ಶಿಕ್ಷಣ ಪರೀವೀಕ್ಷಕರು ಶಶಿಕಾಂತ್ ಬಿ ಬಸಾಪುರ್ ಇವರೆಲ್ಲರೂ ಉಪಸ್ಥಿತರಿದ್ದರು. 


ಸುದ್ದಿ ಓದಿ