ರಾಣೆಬೆನ್ನೂರ

ಬಸವೇಶ್ವರರ ಜಯಂತ್ಯೋತ್ಸವ ನಿಮಿತ್ಯ ಜಿಲ್ಲಾ ಮಟ್ಟದ ಕವಿಗೋಷ್ಠಿ

ಬಸವೇಶ್ವರರ ಜಯಂತ್ಯೋತ್ಸವ ನಿಮಿತ್ಯ ಜಿಲ್ಲಾ ಮಟ್ಟದ ಕವಿಗೋಷ್ಠಿ

ರಾಣಿಬೆನ್ನೂರ 17: ಕಾವ್ಯ ಎಂಬುದು ಸುಂದರ ಪ್ರತಿಮೆಯ ವರ್ಣನೆ ಅಲ್ಲ, ಅದು ಮನಸ್ಸಿಗೆ ಮುಟ್ಟಬೇಕು. ಕವಿಯು ಮಾಗದ ಹೊರತು, ಭಾಗದ ಹೊರತು, ಗಟ್ಟಿ ಕಾವ್ಯ ಹುಟ್ಟಲು ಸಾಧ್ಯವಿಲ್ಲ ಎಂದು ಹಾವೇರಿಯ ಸಾಹಿತಿ ಪುಷ್ಪಾ ಶಲವಡಿಮಠ ಹೇಳಿದರು. 

ಇಲ್ಲಿನ ವಾಗೀಶನಗರದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸೋಮವಾರ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಸಂಗೀತ ಮತ್ತು ತರಬೇತಿ ಸಂಸ್ಥೆ ಆಶ್ರಯದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ಏರಿ​‍್ಡಸಿದ  ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನೋವು, ಸೋಲು ಅವಮಾನಗಳು ಕಾವ್ಯ ಹುಟ್ಟಲು ವೇದಿಕೆಯಾಗಿದೆ. ಕಾವ್ಯ ದೀಡೀರ್ ಎಂದು ಹುಟ್ಟುವುದಿಲ್ಲ ಅದಕ್ಕೆ ಧ್ಯಾನಸ್ಥ ಸ್ಥಿತಿ ಬೇಕು. ಜೀವನ ಅನುಭವದ ದ್ರವ್ಯ ಬೇಕು. ಸಮಾಜದ ವರ್ತಮಾನಗಳಿಗೆ ಕವಿ ಹೃದಯ ಸದಾ ತೆರೆದಿರಬೇಕು. ಕವಿ ಒಬ್ಬ ಸಮಾಜ ತಿದ್ದುವ ಶಿಕ್ಷಕ ಅವನಿಗೆ ಸಾಮಾಜಿಕ ಜವಾಬ್ದಾರಿ ಇದೆ ಎಂದರು. 

ಕವಿಯತ್ತ ಸಮಾಜ ಸದಾ ದೃಷ್ಟಿ ಇಟ್ಟು ನೋಡುತ್ತದೆ. ಕವಿಗೆ ನೈತಿಕತೆಯ ಹಾದಿಯ ಪಯಣಬೇಕು. ಕವಿ ಅಥವಾ ಬರಹಗಾರ ಆದವರು ನಾನು ಶ್ರೇಷ್ಠ, ನನ್ನದೇ ಶ್ರೇಷ್ಠ ಎಂಬ ಅಹಂಕಾರದ ಕೀರೀಟ ಧರಿಸಬಾರದು. ಎಂದು ಕಿವಿ ಮಾತು ಹೇಳಿದರು. 

ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಕವಿ ದೇವರಾಜ ಹುಣಸಿಕಟ್ಟಿ ಮಾತನಾಡಿ,  ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಶರಣ ಚಳುವಳಿ ದೇಹವನ್ನೇ ದೇಗುಲವಾಗಿಸಿ ಕಾಯಕದಲ್ಲಿ ದೇವರನ್ನು ಕಾಣುವಂತೆ ಮಾಡಿದರು. ನಾವು ಇಂದು ಅದೇ ಬಸವಣ್ಣನನ್ನು ಸ್ಥಾವರಗೊಳಿಸಿ ಪೂಜಿಸುವ ಹಂತಕ್ಕೆ ತಲುಪಿದ್ದೇವೆ ಎಂದರು. 

ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಒಟ್ಟು 25 ಕವಿಗಳು ತಮ್ಮ ಕವಿತಾ ವಾಚನ ಮಾಡಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ  ವೀರೇಶ್ ಜಂಬಿಗಿ. ಕಸಾಪ ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ, ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ ಹಾಗೂ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಅಧ್ಯಕ್ಷ  ಬಸವರಾಜ ಸಾವಕ್ಕನವರ, ಮಂಜುನಾಥ ಬೂದನೂರು, ಮಮತಾ ಸಾವಕ್ಕನವರ, ಎಚ್‌.ಎಚ್‌. ದೊಡ್ಡಮನಿ, ಬೀರ​‍್ಪ ಲಮಾಣಿ, ಡಾ. ಬಿ.ಆರ್ ಅಂಬೇಡ್ಕರ್ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ