ಧಾರವಾಡ - ಹುಬ್ಬಳ್ಳಿ

ಸೆಪ್ಟೆಂಬರ 4 ರಂದು ಜಿಲ್ಲಾಮಟ್ಟದ ಸಭೆ

ಸೆಪ್ಟೆಂಬರ 4 ರಂದು  ಜಿಲ್ಲಾಮಟ್ಟದ ಸಭೆ

ಧಾರವಾಡ 03: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್‌.ವಿ.ದೇಶಪಾಂಡೆ ಅವರು ನಾಳೆ ಸೆಪ್ಟೆಂಬರ 4 ರಂದು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಆಡಳಿತ ಸುಧಾರಣಾ ಆಯೋಗದ ಜಿಲ್ಲಾ ಮಟ್ಟದ ಸಭೆ ಜರುಗಿಸಲಿದ್ದಾರೆ.  

ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು, ಮಹಾನಗರ ಪಾಲಿಕೆ ಮೆಯರ್, ನಗರ ಸಭೆ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಸಿಇಓ, ಜಿಲ್ಲಾ ಮಟ್ಟದ ಮತ್ತು ಉಪವಿಭಾಗ ಮಟ್ಟದ ಅಧಿಕಾರಿಗಳು ಭಾಗವಹಿಸಿ ಆಡಳಿತ ಸುಧಾರಣೆ ಬಗ್ಗೆ ತಮ್ಮ ಇಲಾಖೆಗಳ ಸಲಹೆಗಳನ್ನು ನೀಡಲಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.  

ಸುದ್ದಿ ಓದಿ