ಭ್ರಷ್ಟ ಅಧಿಕಾರಿ ಮೇಲೆ ಕ್ರಮ ಜರುಗಿಸದ ಜಿಲ್ಲಾಡಳಿತ: ಕಾಟಾಚಾರದ ಜನಸ್ಪಂದನ ಸಭೆ ಎಂದು ಲೇವಡಿ
ರಾಣೇಬೆನ್ನುರು 12: ಮೂರು ತಿಂಗಳಿಗೊಮ್ಮೆ ಆಯಾ ಶಾಸಕರುಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಕುಂದುಕೊರತೆ ನಿವಾರಣೆಗಾಗಿ ಸರ್ಕಾರ ಭಾರಿ ಪ್ರಚಾರದೊಂದಿಗೆ ಪ್ರಾರಂಭಿಸಿರುವ ಜನಸ್ಪಂದನ ಸಭೆ ಅರ್ಥವಿಲ್ಲದ ಕಾಟಾಚಾರದ ಕಾರ್ಯಕ್ರಮವಾಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ. ಇತ್ತೀಚೆಗೆ ರಾಣೇಬೆನ್ನೂರು ತಾಲೂಕಿನ ಜನಸ್ಪಂದನ ಸಭೆ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ದಂಡಿನೊಂದಿಗೆ ಭಾರಿ ಪ್ರಚಾರದೊಂದಿಗೆ ಈಗಾಗಲೇ ಎರಡು ಬಾರಿ ನಡೆದಿದೆಯಾದರೂ ಅಲ್ಲಿ ಸಾರ್ವಜನಿಕರ ಯಾವುದೇ ಸಮಸ್ಯೆ ಇತ್ಯಾರ್ಥವಾಗದೆ ಇರುವುದು ಜನಸ್ಪಂದನ ಕಾರ್ಯಕ್ರಮಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನ ಮಾಕನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾಽಽ ಸಹನಾ ಎಂಬ ವೈದ್ಯೆ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ ವಿಪರೀತ ತೊಂದರೆ ಕೊಡುತ್ತಿರುವ ಬಗ್ಗೆ ಇದುವರೆಗೂ ಯಾವ ರೋಗಿಯನ್ನು ಮುಟ್ಟಿ ಚಿಕಿತ್ಸೆ ನೀಡದೆ ದರ್, ಅಹಂಕಾರದಿಂದ ಮೆರೆಯುತ್ತಿರುವ ಬಗ್ಗೆ ಕರ್ತವ್ಯಲೋಪ ಹಾಗೂ ಬೇಜವ್ದಾರಿ ತನದ ಬಗ್ಗೆ ವಿವಿಧ ಸಂಘ ಸಂಸ್ಥೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ ಅನೇಕ ದೂರುಗಳು ಬಂದರೂ ಅವರ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವ ಸರಕಾರ ಮತ್ತು ಜಿಲ್ಲಾಡಳಿತದ ಕ್ರಮ ಖಂಡಿಸಿ ಮೊದಲನೆ ಜನಸ್ಪಂದನ ಸಭೆಯಲ್ಲಿ ಈ ಬಗ್ಗೆ ದೂರು ನೀಡಿದ್ದು ತುರ್ತಾಗಿ ಅವರ ಮೇಲೆ ಕ್ರಮ ಕೈಗಳ್ಳಲಾಗುವುದು ಎಂದು ಹೇಳಿ ಕೈ ತೊಳೆದುಕೊಂಡ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮತ್ತೊಂದು ‘ಜನಸ್ಪಂದನ’ ಕಾರ್ಯಕ್ರಮ ಬಂದರೂ ಆ ವೈದ್ಯರ ಬಗ್ಗೆ ಮತ್ತೆ ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ, ರೈತಮುಖಂಡರಿಂದ ದೂರು ಬಂದಾಗ ವಿಚಲಿತರಾದ ಜಿಲ್ಲಾಧಿಕಾರಿ ಈಗ ತುರ್ತುಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿ ಸಾರ್ವಜನಿಕರನ್ನು ಸಮಾಧಾನಪಡಿಸಿ ಕಳುಹಿಸಿ ‘20’ ದಿನ ಕಳೆದು ಮತ್ತೆ ಮೂರನೆ ಜನಸ್ಪಂದನ ಕಾರ್ಯಕ್ರಮ ಹತ್ತಿರ ಬಂದರೂ ಆ ವೈದ್ಯೆ ಮಾತ್ರ ನನಗೂ ಆ ಜನಸ್ಪಂದನ ಕಾರ್ಯಕ್ರಮದಲ್ಲಿ ತನ್ನ ಬಗ್ಗೆ ಬಂದ ದೂರಿಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದನ್ನು ಖಂಡಿಸಿ ದಿನಾಂಕ: 15. ರ ಸೋಮವಾರ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿಗೆ ಬೀಗ ಜಡಿಯುವ ಕಾರ್ಯಕ್ರಮವನ್ನು ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಯವರು ಹಮ್ಮಿಕೊಂಡಿರುವುದು ತಿಳಿದು ಬಂದಿದೆ.