ಧಾರವಾಡ - ಹುಬ್ಬಳ್ಳಿ

ಆಗಸ್ಟ್‌ 04 ರಂದು ಜಿಲ್ಲಾ ಯೋಗಾಸನ ಸ್ಪರ್ಧೆ

ಆಗಸ್ಟ್‌ 04 ರಂದು ಜಿಲ್ಲಾ ಯೋಗಾಸನ ಸ್ಪರ್ಧೆ

ಧಾರವಾಡ ,31: ಕರ್ನಾಟಕ ಯೋಗಸನ ಕ್ರೀಡಾ ಸಂಸ್ಥೆಯು ತನ್ನ 5ನೇ ವರ್ಷದ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ದಿನಾಂಕ 17 ಮತ್ತು 18 ಆಗಸ್ಟ್‌ 2024 ರಂದು ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪ, ಮಲ್ಲೇಶ್ವರ, ಕಡೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಲಿದೆ.  

ಈ ಸ್ಪರ್ಧೆಗೆ ಧಾರವಾಡ ಜಿಲ್ಲೆಯ ಯೋಗ ಪಟುಗಳನ್ನು ಆಯ್ಕೆ ಮಾಡಲು ಆಗಸ್ಟ್‌ 04  2024 ರವಿವಾರ ಸ್ಥಳ  ಆರ್ ಎನ್ ಶೆಟ್ಟಿ ಒಳಾಂಗಣ ಕ್ರೀಡಾಂಗಣ, ಧಾರವಾಡ ದಲ್ಲಿ ಬೆಳಗ್ಗೆ 8 ರಿಂದ ಧಾರವಾಡ  ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.   

ಇಂದು ಯೋಗಾಸನವನ್ನು ಭಾರತ ಸರ್ಕಾರ ಕ್ರೀಡೆ ಎಂದು ಪರಿಗಣಿಸಿದೆ. ಯೋಗಾಸನ ಭಾರತ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರ ರಾಷ್ಟೀಯ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತವೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ನಮ್ಮ ಸಂಸ್ಥೆಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಮುಂಬರುವ ಒಲಂಪಿಕ್ಸ್‌ ನಲ್ಲಿ ಯೋಗವನ್ನು ಸೇರೆ​‍್ಡಗೊಳಿಸಿದ್ದಾರೆ. ಇದಕ್ಕಾಗಿ ಭವರಲಾಲ್ ಆರ್ಯ ಅವರು ಯೋಗಾಸನ ಭಾರತ ಸಂಸ್ಥೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.  

ಸ್ಪರ್ಧೆ ಒಟ್ಟು 5 ವಿಭಾಗಗಳಲ್ಲಿ ನಡೆಯುತ್ತದೆ ಸಬ್ ಜೂನಿಯರ್ ವಿಭಾಗ 10 ರಿಂದ  14 ವರ್ಷ,  ಜೂನಿಯರ್ ವಿಭಾಗ 14 ರಿಂದ 18 ವರ್ಷ , ಸೀ ನಿಯರ್ ವಿಭಾಗ 18 ರಿಂದ ಮತ್ತು ಮೇ ಲ್ಪಟ್ಟವರು , ಮಾಸ್ಟರ್ಸ್‌ ವಿಭಾಗ 36 ರಿಂದ 45 ವರ್ಷ,  ವೇಟರ್ನಲ್ಸ್‌ ವಿಭಾಗ 45 ರಿಂದ  55ವರ್ಷದವರಿಗೆ ಸ್ಪರ್ಧೆ ನಡೆಯಲ್ಲಿದೆ. 

ಪ್ರತಿ ವಿಭಾಗದಲ್ಲಿ ಪುರುಷ ಮತ್ತು ಮಹಿಳಾ ಪ್ರತ್ಯೇಕ ಸ್ಪರ್ಧೆ ಇರುತ್ತದೆ. ಮುಖ್ಯವಾಗಿ ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರತಿಭೆಗಳು ಈ ಸ್ಪರ್ಧೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.  

ಆಸಕ್ತ ಕ್ರೀಡಾಪಟುಗಳು ಡಾ. ಪ್ರಕಾಶ ಪವಾಡಶೆಟ್ಟಿ, ಸಂಯೋಜಕರು ಧಾರವಾಡ ಜಿಲ್ಲಾ  ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್, ಮೊಬೈಲ್ ಸಂಖ್ಯೆ : 8050415326 , 9008100896 ಇವರನ್ನು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕೆಂದು ಕೋರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ ಫೆಡರೇಶನ್ ರಾಷ್ಟ್ರೀಯ ನಿರ್ದೇಶಕರಾದಭವರಲಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಧಾರವಾಡ ಜಿಲ್ಲಾ  ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ಸುಲಾಖೆ, ದೇವೇಂದ್ರ, ಅಕ್ಷಯ್, ವೀರೇಶ್ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ