ಗದಗ

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ



          ಗದಗ 13: ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ರಾಯರಡ್ಡಿ ಅವರು  ನವೆಂಬರ್ 15 ರಿಂದ 18 ರವರೆಗೆ ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು  ವಿವರ ಈ ಕೆಳಗಿನಂತಿದೆ. ನವೆಂಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡದಿಂದ ಹೊರಟು ಬೆಳಿಗ್ಗೆ 11 ಗಂಟೆಗೆ ಗದಗ  ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುವರು ಹಾಗೂ ವಿವಿಧ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವರು.

         ಮಧ್ಯಾಹ್ನ 12.30 ಗಂಟೆಗೆ ಗದಗಿನಿಂದ ಹೊರಟು ಯಲಬುರ್ಗಾಕ್ಕೆ ಪ್ರಯಾಣಸಿ ಸಾರ್ವಜನಿಕರ ಭೇಟಿ ಮಾಡುವರು. ನಂತರ ಪುನ: ರಾತ್ರಿ 7 ಗಂಟೆಗೆ ಗದುಗಿಗೆ ಆಗಮಿಸುವರು. ನವೆಂಬರ್ 16 ರಂದು ಬೆಳಿಗ್ಗೆ  10.30 ಗಂಟೆಗೆ ಗದಗ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವರು.  ನವೆಂಬರ್ 16 ಮತ್ತು 17 ರಂದು ಗದಗನಲ್ಲಿ ವಾಸ್ತವ್ಯ ಮಾಡುವರು.  ನವೆಂಬರ್ 18 ರಂದು ಬೆಳಿಗ್ಗೆ 9.30 ಗಂಟೆಗೆ ಗದುಗಿನಿಂದ  ಹೊರಟು ಬೆಳಿಗ್ಗೆ 10.30 ಗಂಟೆಗೆ ಯಲಬುರ್ಗಾಕ್ಕೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ