ರಾಣೆಬೆನ್ನೂರ

ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಅತೀಅವಶ್ಯ

ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಅತೀಅವಶ್ಯ

ರಾಣಿಬೆನ್ನೂರ:7 ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಇಂದು ಅತೀಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು, ಯುವಕರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಪರಿಸರವನ್ನು ಉಳಿಸಲು ಮುಂದಾಗಬೇಕು ಎಂದು ಜಿಲ್ಲಾ ಪೋಲಿಸ್  ವರಿಷ್ಠಾಧಿಕಾರಿ ಅಂಶುಕುಮಾರ ಹೇಳಿದರು. 

ಗುರವಾರ ನಗರದ ಹೊರವಲಯದ ಪೋಲಿಸ್ ಕವಾಯತು ಮೈದಾನದಲ್ಲಿ ಹಾವೇರಿ ಜಿಲ್ಲಾ ಪೋಲಿಸ್  ಇಲಾಖೆ,  ರಾಣಿಬೆನ್ನೂರ ಉಪವಿಭಾಗ ಪೋಲಿಸಿಲಾಖೆ, ಸಮಾಜಿಕ ಅರಣ್ಯ ಇಲಾಖೆ,  ಸರ್ಕಾರಿ ಪ್ರಥಮ ದರ್ಜೆ ಮಾಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಓಂ ಪಬ್ಲಿಕ ಶಾಲೆ ಇವರ ಆಶ್ರಯದಲ್ಲಿ ಏರಿ​‍್ಡಸಿದ್ದ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಪ್ರಕೃತಿಯು ನಮಗೆ ಉಸಿರಾಡಲು ಗಾಳಿ, ಮಳೆ, ಹಣ್ಣು- ಹಂಪಲಗಳನ್ನು ನೀಡುತ್ತದೆ. ಮನುಷ್ಯನನಿಗೂ ಪರಿಸರಕ್ಕೂ ಬಹಳ ಅನನ್ಯ ಸಂಬಂಧವಿದ್ದು, ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ಬೆಳೆಸಿ, ಅವನ್ನು ರಕ್ಷಿಸಬೇಕು. ಇಂದು ವಿಶ್ವದೆಲ್ಲೆಡೆ ಪದೇ ಪದೇ ಪ್ರಕೃತಿ ವಿಕೋಪಗಳು, ಪ್ರತಿವರ್ಷ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಪರಿಸರದ ಸಮತೋಲನ ಕಾಪಾಡಲು ಕೈಜೋಡಿಸಬೇಕೆಂದು ಮನವಿ ಮಾಡಿದರು. 

ಡಿವೈಎಸ್ಪಿ ಡಾ. ಗೀರೀಶ ಭೋಜಣ್ಣನವರ ಮಾತನಾಡಿ, ಇಂದು ನೆಟ್ಟಿರುವ ಸಸಿಗಳನ್ನು ಠಾಣಾವಾರು ಹಂಚಿಕೆ ಮಾಡಿದ್ದು, ಅವುಗಳ ಲಾಲನೆ- ಪಾಲನೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಸೂಚಿಸಿದರು. 

ಹೆಚ್ಚುವರಿ ಎಸಪಿ ಸಿ ಗೋಪಾಲ, ಸರ್ಕಾರಿ ಪದವಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ.ಅರುಣಕುಮಾರ ಚಂದನ್, ಸಾಮಾಜಿಕ ಅರಣ್ಯಾಧಿಕಾರಿ ಪವನ್ ಎರೆಗಲ್, ಶಶಿಕಲಾ ಭೂಮರ್ ಹಾಗೂ ಓಂ ಶಾಲೆಯ ಶಿಕ್ಷಕಿ ಶಬಾನಾ ಹಾಗೂ ನಗರ ಹಾಗೂ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಡಾ. ಶಂಕರ್ ಎಸ್‌.ಕೆ, ಸಿದ್ದೇಶ್ ಎಂ.ಡಿ, ಪ್ರವೀಣಕುಮಾರ, ಲಕ್ಷ್ಮೀಪತಿ ಹಾಗೂ ಪಿಎಸ್‌ಐಗಳಾದ ಗಡ್ಡೆಪ್ಪಾ ಗುಂಜಟಗಿ, ಮಹಾಂತೇಶ ಎಂ.ಎಂ, ಸಂಜೀವಕುಮಾರ, ಪರಶುರಾಮ ಲಮಾಣಿ, ಸಂಗೀತಾ ದೊಡ್ಡಮನಿ, ಪ್ರವೀಣಕುಮಾರ, ಭಾರತಿ ಜೆ.ಇ., ಮಾಳಪ್ಪ ವೈ.ಸಿ., ಜಗದೀಶ ಜಿ. ಹಾಗೂ ಚಂದ್ರಶೇಖರ ವಿಭೂತಿ, ಪೊಲೀಸ್ ಸಿಬ್ಬಂದಿ, ಪ್ರಾಧ್ಯಾಪಕರು, ಎನ್‌ಎಸ್‌ಎಸ್ ಸ್ವಯಂ ಸೇವಕರು, ಓಂ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುನ್ನೂರಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು. 


ಸುದ್ದಿ ಓದಿ