ಪ್ರಗತಿಪರ ರೈತ ಬಾಳಪ್ಪ ಬೆಳಕೂಡಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಲೋಕದರ್ಶನ ವರದಿ
ಮೂಡಲಗಿ 7: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತರಾದ ಬಾಳಪ್ಪ ಬಸಪ್ಪ ಬೆಳಕೂಡ ಅವರು ಕೃಷಿ ಮತ್ತು ಸಹಕಾರರಂಗದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ 2026ನೇ ಸಾಲಿನ ಬೆಳಗಾವಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯವರು ಕೊಡಮಾಡುವ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಬಾಳಪ್ಪ ಬೆಳಕೂಡ ಅವರುಕೃಷಿಯಲ್ಲಿ ಶೇ.75 ಸಾವಯವ ಮತ್ತ ಶೇ.25ರಷ್ಟು ರಾಸಾಯನಿಕ ಪದ್ದತಿಯನ್ನು ಅಳವಡಿಸಿಕೊಂಡು ಅಪಾರವಾದ ಸಾಧನೆಯನ್ನು ಮಾಡಿದ್ದಾರೆ. 1 ಎಕರೆಗೆ 130 ಟನ್ಕಬ್ಬು ಬೆಳೆದು ದಾಖಲೆ ಮಾಡಿದ್ದಾರೆ.
1 ಎಕರೆಯಲ್ಲಿ 55ರಿಂದ 60 ಕ್ವಿಂಟಲ್ ಅರಿಶಿಣ, 25ರಿಂದ 35 ಕ್ವಿಂಟಲ್ ಹುರಳಿ, 50ರಿಂದ 60 ಕ್ವಿಂಟಲ್ ಗೋವಿನ ಜೋಳವನ್ನು ಬೆಳೆದು ಮಾದರಿಯೆನಿಸಿದ್ದಾರೆ. ಕೃಷಿ ಇಲಾಖೆ, ಅರಭಾವಿ ತೋಟಗಾರಿಕೆ ಕಾಲೇಜು ಸೇರಿದಂತೆ ವಿವಿಧ ರಾಜ್ಯಗಳಿಂದ ರೈತರು ಅಧ್ಯಯನಕ್ಕಾಗಿ ಮತ್ತು ಜಮೀನದಲ್ಲಿ ಅಳವಡಿಸಿರುವ ಕೃಷಿ ಪದ್ದತಿಯನ್ನು ತಿಳಿಯಲು ಇವರ ತೋಟಕ್ಕೆ ಬರುತ್ತಾರೆ.
ಸಮೀರವಾಡಿ ಸೊಮೈಯಾ ಸಕ್ಕರೆ ಕಾರ್ಖಾನೆಯ ಮಾಲೀಕರಾದ ಸಮೀರ ಹಾಗೂ ಮಹಾರಾಷ್ಟ್ರ ಸರ್ಕಾರದಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಸುಧೀರಕುನಾರ ಗೋಯಲ್ ಬೆಳಕೂಡ ಅವರ ಜಮೀನಿಗೆ ಭೇಟ್ಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗೆ ಬೆಳಗಾವಿಯಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭವಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿರುವರು.