ಜಿಲ್ಲಾ ಸಾಹಿತ್ಯ ಸಮ್ಮೇಳನ: ಬಹಿರಂಗ ಅಧಿವೇಶನ, ನಿರ್ಣಯಗಳ ಮಂಡನೆ
ರಾಣೇಬೆನ್ನೂರು 12: ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವು, ರವಿವಾರದಿಂದ ಆರಂಭಗೊಂಡು, ಸೋಮವಾರ, ಸಮಾರೂಪ ಸಮಾರಂಭಕ್ಕೂ ಮುನ್ನಾ ನಡೆದ ಬಹಿರಂಗ ಅಧಿವೇಶನದಲ್ಲಿ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರೇಶ್ ಜಂಬಗಿ, ಅವರು ಸಮ್ಮೇಳನದ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮಂಡಿಸಿದರು.
ಹಲಗೇರಿ ಗ್ರಾಮದಲ್ಲಿ ಡಾ:ಪಾಟೀಲ್ ಪುಟ್ಟಪ್ಪ ಅವರ ಸ್ಮಾರಕವನ್ನು ನಿರ್ಮಿಸಬೇಕು. ಬೇಡ್ತಿ- ವರದಾ ನದಿ ಜೋಡಣೆ. ಹಾವೇರಿ ಜಿಲ್ಲೆಯಲ್ಲಿ ಕೆಸಿಸಿ ಬ್ಯಾಂಕ್ ಪ್ರತ್ಯೇಕವಾಗಿ ಸ್ಥಾಪಿಸುವುದು. ಮುಂದಿನ 88 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಣೇಬೆನ್ನೂರಿನಲ್ಲಿ ನಡೆಸಬೇಕು ಎನ್ನುವ ಕುರಿತಂತೆ ನಿರ್ಣಯಿಸಲಾಗಿದೆ. ಸರ್ವಾನುಮತದ ಬಹಿರಂಗ ಸಭೆಯಲ್ಲಿ ಸಮ್ಮೇಳನಾಧ್ಯಕ್ಷ ಜೆ. ಎಂ. ಮಠದ, ಉಪಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕ ಅಧ್ಯಕ್ಷ ವೀರೇಶ್ ಜಂಬಿಗಿ, ಗೌರವಾಧ್ಯಕ್ಷ ಏಕನಾಥ ಭಾನುವಳ್ಳಿ,ಬಿಇಒ ಎಮ್. ಎಚ್. ಪಾಟೀಲ,ಕಾರ್ಯಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ್, ಡಾ:ಕೆ.ಹೆಚ್. ಮುಕ್ಕಣ್ಣನವರ, ಡಾ: ಬಸವರಾಜ ಕೇಲಗಾರ, ಜಗದೀಶ್ ಮಳಿಮಠ, ಪ್ರಭಾಕರ್ ಶಿಗ್ಲಿ, ಭಾರತಿ ಜಂಬಿಗಿ, ಹೆಚ್. ಹೆಚ್.ಜಾಡರ, ಎ. ಬಿ.ರತ್ನಮ್ಮ, ಎಚ್‌ಎಸ್ ಮುದಿಗೌಡರ, ಚಂದ್ರಶೇಖರ ಮಡಿವಾಳರ, ಎಂ ಡಿ ದ್ಯಾಮಣ್ಣನವರ್, ಸೇರಿದಂತೆ, ಮತ್ತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.