ರಾಣೆಬೆನ್ನೂರ

ಜಿಲ್ಲಾಮಟ್ಟದ ಯೋಗ ಸ್ಪರ್ಧೆ: ಹೊಸಮನಿ ಸಿದ್ದಪ್ಪ

ಜಿಲ್ಲಾಮಟ್ಟದ ಯೋಗ ಸ್ಪರ್ಧೆ: ಹೊಸಮನಿ ಸಿದ್ದಪ್ಪ

ಹಾವೇರಿ 27: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾವೇರಿ ಇವರ ಸಹಯೋಗದಲ್ಲಿ ಹಾವೇರಿ ಜಿಲ್ಲಾಮಟ್ಟದ ಯೋಗ ದಸರಾ ಕ್ರೀಡಾಕೂಟ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಯಿತು.  

ಈ ಯೋಗ ಸ್ಪರ್ಧೆಯಲ್ಲಿ ಮಹಿಳೆಯರ ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಅನುಸೂಯ ಚಲ್ಲಾಳ, ದ್ವಿತೀಯ ಹರ್ಷಿತಾ ಮ. ಸೊಲಬಗೌಡರ,ಪುರುಷರ ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸಂಜೀವ ಕುಮಾರ ಹಾಗೂ ದ್ವಿತೀಯ ಚೇತನ, ಚನ್ನಗೌಡ ಬಸವನಾಳ ಮತ್ತು ಪುರುಷರ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಹಾವೇರಿ ಜಿಲ್ಲಾ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ಆಫ್ ಹಾವೇರಿ ಡಿಸ್ಟ್ರಿಕ್ ಜಿಲ್ಲಾ ಸಂಚಾಲಕರಾದ ಜ್ಯೋತಿ ಜ. ಜಂಬಗಿ ಇವರ ಮಾರ್ಗದರ್ಶನದಲ್ಲಿ ತೀರ​‍್ುಗಾರರಾದ ರುದ್ರಗೌಡ ಪಾಟೀಲ ಮತ್ತು ಸುರೇಶ ಅಗಸನಹಳ್ಳಿ ಉಪಸ್ಥಿತರಿದ್ದರು. 


ಸುದ್ದಿ ಓದಿ