ಬ್ಯಾಡ್ಗಿ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರ​‍್ಪ ಲಮಾಣಿ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರ​‍್ಪ ಲಮಾಣಿ
District In-charge Minister and Minister for Sugar and Textiles, Rudrappa Lamani, inaugurated the st

             ಬ್ಯಾಡಗಿ 28 : ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಬೆಂಗಳೂರು ಹಾಗೂ ಶಿಕ್ಷಣ ಇಲಾಖೆ ಹಾವೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಂದಿನಿಂದ ನಡೆಯುತ್ತಿರುವ 19 ವರ್ಷದೊಳಗಿನ ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಮಾತನಾಡಿದವರು ಕಬಡ್ಡಿ ನಮ್ಮ ನಾಡಿನ ಮಣ್ಣಿನ ಸೊಗಡಿನ ಕ್ರೀಡೆಯಾಗಿದ್ದು ಗ್ರಾಮೀಣ ಪ್ರದೇಶದ ಇವತ್ತಿರಲ್ಲಿ ದೈಹಿಕ ಸಾಮರ್ಥ್ಯ ಶಿಸ್ತು ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

             ಇಂದಿನ ಆಧುನಿಕ ಕ್ರೀಡೆಗಳ ನಡುವೆ ದೇಸಿ ಕ್ರೀಡೆಗಳ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಇಂತಹ ರಾಜ್ಯ ಮಟ್ಟದ ಪಂದ್ಯಾವಳಿಗಳು ಗ್ರಾಮೀಣ ಪ್ರತಿಭೆಗಳಿಗೆ ರಾಜ್ಯಮಟ್ಟದ ತಮ್ಮ ಕ್ರೀಡಾ ಪ್ರಾಮುಖ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

               ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ ತನ್ನದೇ ಆದ ಇತಿಹಾಸ ಹೊಂದಿದ ತಾಲೂಕು ಬ್ಯಾಡಗಿ ವೀಷೆಶವಾಗಿ ಕಬಡ್ಡಿ ಕ್ರೀಡೆಯ ಬಗ್ಗೆ ಆಸಕ್ತಿ ಇರುವಂತಹ ನಮ್ಮ ತಾಲೂಕು ರಾಷ್ಟ್ರೀಯ ಮಟ್ಟದ ರಾಜ್ಯ ಮಟ್ಟದ ಕ್ರೀಡೆ ನಡೆಯುತ್ತಿರುವುಧು ನಮ್ಮ ಭಾಗ್ಯ.ಈ ಪಂದ್ಯಾವಳಿಗೆ ಪಟ್ಟಣದ ಸಂಘ ಸಂಸ್ಥೆಗಳು ಹಾಗೂ ಕ್ರೀಡಾಪ್ರೇಮಿಗಳ ಕೊಡುಗೆ ಅಪಾರವಾಗಿದೆ.ಕ್ರೀಡಾ ಮನೂಭಾದಿಕದ ಆಟ ಆಡಲು ಮಕ್ಕಳಿಗೆ ಮನವಿ.ಎಲ್ಲ ತಿಪುಗಾರರು ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಎಂದರು.

               ಕ್ರೀಡೆಗೆ ಪ್ರೋತ್ಸಾಹ ಅಗತ್ಯ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಹಿಳೆ ಕೆವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕೊಳ್ಳವಳು ಅಲ್ಲಾ ಹೆಣ್ಣು ಮಗಳು ಪುರುಷ ಸಮಾನ ಪ್ರತಿ ಕ್ಷೇತ್ರದಲ್ಲೂ ತನ್ನ ಚಾಪು ಮೂಡಿಸಿದ್ದಾಳೆ.ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಶಾಸಕ ನೆಹರೂ ಓಲೇಕಾರ.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ . ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್ ಆರ್ ಪಾಟೀಲ.ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ.ಫೋಲಿಸ ವರಿಷ್ಠಾಧಿಕಾರಿ ಯಶೋಧ ವಂಟಗೋಡೆ.                                        ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ.ತಹಶಿಲ್ದಾರ ಸಾರಿಕಾ ಶಿಂಗನಮಕ್ಕಿ.ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ.ಜಿಲ್ಲಾ ಕ್ರೀಡಾಅದಿಕಾರಿ ಲತಾ.ವಿನಯಕುಮಾರ ಎಚ್‌.ಶಂಭನಗೌಡ ಪಾಟೀಲ.ಗಂಗಣ್ಣಾ ಎಲಿ.ಎಲ್ ಮಹ್ಮದ ಇಸ್ಮಾಯಿಲ್‌.ಹಾಗೂ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳು ದೈಹಿಕ ಶಿಕ್ಷಕರು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ