ರೋಟರಿ ಸಂಸ್ಥೆಗೆ ಜಿಲ್ಲಾ ಗವರ್ನರ್ ನಾಶಿರ ಭೇಟಿ
ಜಮಖಂಡಿ 07: ನಗರದ ಜಮಖಂಡಿ ರೋಟರಿ ಸಂಸ್ಥೆಗೆ ಜಿಲ್ಲಾ ಗವರ್ನರ್ ನಾಶಿರ ಅಧಿಕೃತ ಭೇಟಿ ನೀಡಿ, ಸದಸ್ಯರೊಂದಿಗೆ ಸಂವಾದ ನಡೆಸಿ. ನಂತರ ರುದ್ರಸ್ವಾಮಿಪೇಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೀಗೆ ಕಲಿಕಾ ಪರಿಕರಗಳನ್ನು ವಿತರಿಸಿದರು.
ಜಿಲ್ಲಾ ಗವರ್ನರ್ ನಾಶಿರ ಮಾತನಾಡಿದ ಅವರು, ರೋಟರಿ ಕ್ಲಬ್ ಸಂಸ್ಥೆ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸುವುದರೊಂದಿಗೆ, ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪೂರೈಸಿದ್ದು ಪ್ರಶಂಸ ಎಂದರು.
ರೋಟೇರಿಯನ್ ಮಹಾವೀರ ಕೋರಿ ಇವರ ಜನ್ಮದಿನದ ನಿಮಿತ್ಯ ಬಿಸಿಯೂಟ ಅಡುಗೆ ಪಾತ್ರೆ-ಪರಿಕರಗಳನ್ನು ವಿತರಿಸಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ರವಿ ಗವಳಿ, ಕಾರ್ಯದರ್ಶಿ ಬಸವರಾಜ ಆಲಗೂರ, ಖಜಾಂಚಿ ಶ್ರೀಶೈಲ ತೇಲಿ, ಮಹಾವೀರ ಕೋರಿ, ಎಸ್.ವೈ. ಬಿರಾದಾರ, ರಾಜಶೇಖರ ಕೋವಳ್ಳಿ, ಕಿರಣ ದೇಸಾಯಿ, ಡಾ.ಆರ್.ವಿ.ಮೆಟಗುಡ್, ಡಾ.ಕೆ.ಐ. ಗುರುಮಠ, ಸುಭಾಷ ಕಾಶೀದ, ಪ್ರಕಾಶ ಗೌಡರ, ಗೋಪಾಲಕೃಷ್ಣ ಪ್ರಭು, ಪ್ರವೀಣ ಜಾಡ, ಪ್ರಶಾಂತ ಗಾತಾಡೆ, ಸಾಗರ ಆಲಗೂರ, ನಿರ್ಮಲ ಪಾಟೀಲ, ಬಸವರಾಜ ಬಳಗಾರ, ಗಂಗಾಧರ ಮಠಪತಿ ಅನೇಕರಿದ್ದರು.