ಹರಗಿನಡೋಣಿ ಗ್ರಾಮಕ್ಕೆ ಕೆರೆ ನಿರ್ಮಿಸಲುಆಗ್ರಹಿಸಿ ಜಿಲ್ಲಾಧಿಕಾರಿಗಳ ಭೇಟಿ

ಹರಗಿನಡೋಣಿ ಗ್ರಾಮಕ್ಕೆ ಕೆರೆ ನಿರ್ಮಿಸಲುಆಗ್ರಹಿಸಿ ಜಿಲ್ಲಾಧಿಕಾರಿಗಳ ಭೇಟಿ District Collector visits Haraginadoni village, demands construction of lake

ಬಳ್ಳಾರಿ 13:  ಹರಗಿನಡೋಣಿ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನಾ ಧರಣಿಯ ಹಿನ್ನೆಲೆಯಲ್ಲಿ ಡಿಸಿ ಯವರನ್ನು ಬೇಟಿ ಮಾಡಲಾಯಿತು. ಡಿಸಿ ಯವರು ಎಲ್ಲಾ ಬೇಡಿಕೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಮಾತನಾಡಿದರು. ಕೆ.ಎಂ.ಇ.ಆರಿ​‍್ಸ ಹಣದಿಂದ ಈ ಸಲ ಮೊದಲನೇ ಆದ್ಯತೆಯಾಗಿ ಕೆರೆ ನಿರ್ಮಾಣ ಖಂಡಿತವಾಗಿ ಮಾಡೇ ಮಾಡುತ್ತೇವೆ ಎಂದು ಕೂಲಂಕಷವಾಗಿ ಚರ್ಚಿಸಿ ಒಂದು ದಿನ ಊರಿಗೆ ಬರುತ್ತೇನೆ ಎಂದು ಭರವಸೆ ನೀಡಿದರು.

ಇನ್ನುಳಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ ವಸತಿ ಸಂಬಂಧಪಟ್ಟ ಹಾಗೆ ಸಂಪೂರ್ಣವಾಗಿ ವಸತೀಹೀನರು ನಿವೇಶನಹೀನರಿಗೆ ಮೊದಲ ಆದ್ಯತೆಯಾಗಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೆಯೇ ಈಗಾಗಲೇ ಭೂಮಿಯನ್ನು ಗುರುತಿಸಲ್ಲಾಗಿದೆ ಎಂದು ತಿಳಿಸಿದರು.ಹಾಗೆಯೇ ಕಾರ್ಮಿಕರಿಗೆ ಕೆಲಸ, ಮಹಿಳೆಯರಿಗೆ ಕರಕೌಶಲ್ಯ ಕೆಲಸ ಈ ವಿಷಯಕ್ಕೆ ಸಂಬಂಧಿಸಿದ ಒಂದು ಸಭೆ ನಡೆಸಿ ಕಾರ್ಯ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ಹಾಗೆಯೇ ಗ್ರಾಮದ ಸುತ್ತಮುತ್ತಲಿನ ಕೈಗಾರಿಕೆಗಳಿಂದ ಆಗುತ್ತಿರುವ ವಾಯುಮಾಲಿನ್ಯ ಕುರಿತು ಕೂಡಲೇ ಮಾಲಿನ್ಯ ನಿಯಂತ್ರಣ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ದೇಶಿಸುವುದಾಗಿ ಹೇಳಿದರು.

ಹಾಗೆಯೇ ಬೆಳಗಲ್ ಗ್ರಾಮದಲ್ಲಿ ನಿರ್ಮಾಣ ಆದ ಆಸ್ಪತ್ರೆಯ ಪ್ರಾರಂಭಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ಈಗಾಗಲೇ ಮೂಲ ಸೌಕರ್ಯಗಳು ಮತ್ತು ಸಿಬ್ಬಂದಿಗಳಿಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಇಂದು ನಿಯೋಗದಲ್ಲಿ ಗಣಿಪಾದಿತ ಪರಿಸರ ಮತ್ತು ಜನಪದ ಹೋರಾಟ ಸಮಿತಿಯ ರಾಜ್ಯ ಸಂಚಾಲಕರರಾದ ಡಿ ನಾಗಲಕ್ಷ್ಮಿ ರಾಜ್ಯ ಸಮಿತಿ ಸದಸ್ಯರಾದ ಆರ್ ಸೋಮಶೇಖರ್ ಗೌಡ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ ದೇವದಾಸ್ ಗ್ರಾಮದ ಮಾಜಿ ಉಪಾಧ್ಯಕ್ಷರಾದ ಚಂದ್ರ ಮಾಜಿ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮೀ ,ಎಗ್ಗೆ ಶಿವರಾಮ,ಆಲ್ದಳ್ಳಿ ರಮೇಶ್,ಯಂಕಾರೆಡ್ಡಿ ಇನ್ನಿತರ ಮುಖಂಡರಗಳು ಆಗಮಿಸಿದ್ದರು.