ಸೋಂಕಿತರು ಹೆಚ್ಚಿರುವ ಗ್ರಾಮಗಳ ಸೀಲ್ಡೌನ್ಗೆ ಜಿಲ್ಲಾಧಿಕಾರಿ ಆದೇಶ
ತಹಸೀಲ್ದಾರ ಪರಿಮಳಾ ದೇಶಪಾಂಡೆ ಹೇಳಿಕೆ: ಶಿರಗುಪ್ಪಿ, ಮೋಳೆ ಸಂಪೂರ್ಣ ಸೀಲ್ಡೌನ್
ಶೇಡಬಾಳ 13: ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಹತೋಟೆಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಕೊರೋನಾ ಸಂಖ್ಯೆ ಇಳಿಮುಖ ಮಾಡಲು ಪಣತೊಟ್ಟಿರುವ ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಸೋಂಕಿತರು ಹೆಚ್ಚಿರುವ ಗ್ರಾಮಗಳನ್ನು ಸೀಲ್ಡೌನ್ ಮಾಡಲು ಆದೇಶ ನೀಡಿದ್ದಾರೆ ಎಂದು ತಹಸೀಲ್ದಾರ ಪರಿಮಳಾ ದೇಶಪಾಂಡೆ ಹೇಳಿದರು.
ಇಂದು ಕಾಗವಾಡ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು. ಕಾಗವಾಡ ತಾಲೂಕಿನಾದ್ಯಂತ ಎರಡು ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ಸದ್ಯ ಶಿರಗುಪ್ಪಿ ಹಾಗೂ ಮೋಳೆ ಗ್ರಾಮಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಿರುವುದಾಗಿ ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ್ಪನವರು ಜೂನ 21 ರವರೆಗೆ ಲಾಕ್ ಡೌನ್ ವಿಸ್ತರಿಸಿ ಕೊರೋನಾ ಹತೋಟೆಗೆ ತರಲು ಅಗತ್ಯ ಕಠಿಣ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅವರ ಆದೇಶದಂತೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಗ್ರಾಮಗಳನ್ನ ಸಂಪೂರ್ಣ ಸೀಲ್ಡೌನ್ ಮಾಡುವುದರಿಂದ ಗ್ರಾಮದಲ್ಲಿಯ ರೋಗಿಗಳನ್ನು ಸಾಗಿಸಲು ಮತ್ತು ರೈತರಿಗೆ ಹಾಗೂ ದಿನಗೂಲಿ ಮಾಡುವವರಿಗೆ ಅನಾನುಕೂಲವಾಗುತ್ತದೆ ಎಂದು ಕೆಲ ಗ್ರಾಮಗಳಲ್ಲಿ ಆಕ್ಷೇಪ ವ್ಯಕ್ತ ಪಡಿಸಿದಾಗ ಸೀಲ್ಡೌನ್ ಬದಲಾಗಿ ಆಯಾ ವಾರ್ಡುಗಳನ್ನು ಸೀಲ್ಡೌನ್ ಮಾಡಬೇಕೆಂದಾಗ ಅಧಿಕಾರಿಗಳು ವಾರ್ಡುಗಳನ್ನು ಸೀಲ್ಡೌನ್ ಮಾಡಿರುವುದಾಗಿ ತಿಳಿಸಿದರು.
ಈಗ ಸದ್ಯ ಶಿರಗುಪ್ಪಿಯಲ್ಲಿ 22, ಉಗಾರ ಖುರ್ದ 22, ಮೋಳೆ 19, ಐನಾಪುರ 12, ಶೇಡಬಾಳ 15 ಕಾಗವಾಡ 18,ಜುಗೂಳ 11, ಉಗಾರ ಬುದ್ರುಕ್ 09, ಕುಸನಾಳ 07, ಮಂಗಸೂಳಿ 07, ಶಹಾಪೂರ 03, ಕೆಂಪವಾಡ 02, ಕೃಷ್ಣಾ-ಕಿತ್ತೂರ 02, ಮಂಗಾವತಿ 02, ಬಣಜವಾಡ 02, ಕಾತ್ರಾಳ 01, ಲೋಕುರ 01, ನವಲಿಹಾಳ 01, ಹೀಗೆ ಒಟ್ಟು ಕಾಗವಾಡ ತಾಲೂಕಿನಲ್ಲಿ 155 ಪಾಜಟಿವ್ ಸಂಖ್ಯೆ ಇವೆ.
ಶಿರಗುಪ್ಪಿ ಗ್ರಾಮವನ್ನು ಸಿಲ್ಡೌನ್ ಮಾಡುವ ಸಂದರ್ಭದಲ್ಲಿ, ಗ್ರಾ.ಪಂ ಅಧ್ಯಕ್ಷೆ ಗೀತಾಂಜಲಿ ಚೌಗಲೆ, ಉಪಾದ್ಯಕ್ಷ ಮನೋಜ ವಡ್ಡರ, ಸದಸ್ಯರಾದ ರಾಮಗೌಡ ಪಾಟೀಲ, ವಿಜಯಕುಮಾರ ಅಕಿವಾಟೆ, ಸಚೀನ ಕಾಂಬಳೆ, ಅಪ್ಪಾಸಾಬ ಪಾಟೀಲ, ಸಚೀನ ಕುರುಂದವಾಡೆ, ಅಭಿವೃದ್ಧಿ ಅಧಿಕಾರಿ ಶೈಲಜಾ ಭಜಂತ್ರಿ, ಗ್ರಾಮ ಲೆಕ್ಕಾಧಿಕಾರಿ ಅಪ್ಪಯ್ಯ ಹಿರೇಮಠ, ಪದ್ಮಣ್ಣ ಕುಂಬಾರ ಮತ್ತಿತರರು ಇದ್ದರು.
ವಾರ್ಡ್ ಸೀಲ್ಡೌನ್ ; ಕೊರೋನಾ ಪಾಜಟಿವ್ ಕೇಸ್ಗೆ ಸಂಬಂಧಿಸಿದಂತೆ ತಹಸೀಲ್ದಾರ ಪರಿಮಳಾ ದೇಶಪಾಂಡೆಯವರನ್ನು ವಿಚಾರಿಸಿದಾಗ ಕಾಗವಾಡ ತಾಲೂಕಿನಲ್ಲಿ ಸದ್ಯ 155 ಪಾಸಿಟಿವ್ ಸಂಖ್ಯೆ ಇದ್ದು, ತಾಲೂಕಿನಲ್ಲಿ 5 ಕ್ಕಿಂತ ಹೆಚ್ಚು ಸೋಂಕಿತರು ಇರುವ ಗ್ರಾಮಗಳನ್ನು ಸೀಲ್ಡೌನ್ ಮಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು ಅವರ ಆದೇಶದಂತೆ ಸದ್ಯ ಶಿರಗುಪ್ಪಿ ಮತ್ತು ಮೋಳೆ ಗ್ರಾಮಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಿದ್ದೇವೆ. ಇನ್ನುಳಿದ ಗ್ರಾಮಗಳಲ್ಲಿ ಆಯಾ ವಾರ್ಡುಗಳನ್ನು ಸೀಲ್ಡೌನ್ ಮಾಡಲಾಗಿದೆ.
ಪರಿಮಳಾ ದೇಶಪಾಂಡೆ
ತಹಸೀಲ್ದಾರರು ಕಾಗವಾಡ.