ಹೂವಿನ ಹಡಗಲಿ

ಕಾಟಾಚಾರಕ್ಕೆ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಭೂಪರಿಹಾರಕ್ಕಾಗಿ ಹೊಳಗುಂದಿ ರೈತರು ಪ್ರತಿಭಟನೆ

ಕಾಟಾಚಾರಕ್ಕೆ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ  ಭೂಪರಿಹಾರಕ್ಕಾಗಿ ಹೊಳಗುಂದಿ ರೈತರು ಪ್ರತಿಭಟನೆ

ಲೋಕದರ್ಶನ ವರದಿ

ಹೂವಿನಹಡಗಲಿ.19:ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಕಾಲುವೆ ನಿಮರ್ಾಣಕ್ಕೆ ಭೂಮಿ ಕಳೆದುಕೊಂಡ ರೈತರ ಸಂಕಷ್ಟದಲ್ಲಿದ್ದಾರೆ.ಕಳೆದ 13ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ತಾಲೂಕಿನ ಹೊಳಗುಂದಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 

ತಾಲೂಕಿನ ಹೊಳಗುಂದಿಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ಗೈರು ಹಾಜರಿಯಾಗಿದ್ದರಿಂದ ಸಭೆ ಮಾತ್ರ ಕಾಟಾಚಾರಕ್ಕಾಗಿ ನಡೆದಂತೆ ಕಂಡು ಬಂದಿತು.ಸಾಮಾಜಿಕ ಕಾರ್ಯಕರ್ತ ಎ.ಎಂ.ಪಿ.ವಾಗೀಶ ಮಾತನಾಡಿ ರೈತರು ತಮ್ಮ ಜಮೀನು ಕಳೆದುಕೊಂಡು ಪರಿಹಾರ ಇಲ್ಲದೇ ಕಷ್ಟದಲ್ಲಿದ್ದಾರೆ.ಹೊಲವೂ ಇಲ್ಲದೇ ಪರಿಹಾರವೂ ಸಿಗದೇ ರೈತರು ಭೂ ಪರಿಹಾರ ಬರುವ ನಿರೀಕ್ಷೆಯಲ್ಲಿದ್ದಾರೆ.ಎಷ್ಟು ದಿನಗಳು ಬೇಕು ಪರಿಹಾರ ಕೊಡಲಿಕ್ಕೆ ಲಿಖಿತವಾಗಿ ತಿಳಿಸುವಂತೆ ಆಗ್ರಹಿಸಿದರು.

ಕಳೆದ ಫೆಬ್ರವರಿಯಲ್ಲಿ 19(2)ಅಧಿಸೂಚನೆ ಪ್ರಕಟವಾಗಿದೆ.ಒಂದು ವರ್ಷ ಕಾಲಮಿತಿಯೊಳಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಮತ್ತು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಲಿಖಿತ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.  

ತಾತಾನಮಠದ ಬಳಿ ಕೆರೆ ನಿರ್ಮಾಣ : ಹೊಳಗುಂದಿ-ಮೋರಿಗೆರೆ ಮಾರ್ಗದ ತಾತಾನ ಮಠದ ಬಳಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಕೆರೆ ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.ನರೇಗಾ ಯೋಜನೆಯ ಅಮೃತ ಸರೋವರ ಯೋಜನೆ ಅಡಿಯಲ್ಲಿ 20 ಎಕರೆ ವಿಸ್ತೀರ್ಣದ ಕೆರೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಮೂಲಕ ಸಧ್ಯದಲ್ಲೇ ಕೆರೆ ನಿರ್ಮಿಸುತ್ತೇವೆ ಎಂದು ಜಿ.ಪಂ.ಉಪ ಕಾರ್ಯದರ್ಶಿ  ರಂಗಸ್ವಾಮಿ ತಿಳಿಸಿದರು.

ಟಿಸಿಗೆ ಹಣ ಕೇಳಿದರೆ ದೂರು ಕೊಡಿ : ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಜೆಸ್ಕಾಂ ಸಮಸ್ಯೆ ವಿವರಿಸಿ,ದುರಸ್ತಿಗೀಡಾದ ವಿದ್ಯುತ್ ಪರಿವರ್ತಕ ಬದಲಾಯಿಸಲು ಹಣ ಕೇಳುತ್ತಾರೆ.ಕೇಳಿದಷ್ಟು ಹಣ ನೀಡದಿದ್ದರೆ ಟಿಸಿ ಕೊಡದೇ ಸತಾಯಿಸುತ್ತಾರೆ ಎಂದು ಸಭೆಗೆ ಹೇಳಿದರು.

ನಿಯಮ ಪ್ರಕಾರ ವಿಫಲ ವಿದ್ಯುತ್ ಪರಿವರ್ತಕಗಳನ್ನು 24ಗಂಟೆಯಲ್ಲಿ ಬದಲಾಯಿಸಿಕೊಡಬೇಕಿದೆ.ನಮ್ಮಲ್ಲಿ ಟಿಸಿ ಬ್ಯಾಂಕ್ ಇಲ್ಲದಿರುವುದರಿಂದ ವಿಳಂಬವಾಗುತ್ತದೆ.ಕೃಷಿ ಪಂಪ್ ಸೆಟ್ಗಳಿಗೆ ಟಿಸಿ ನೀಡಲು ಯಾರಾದರೂ ಹಣ ಕೇಳಿದರೆ ದೂರು ಕೊಡಿ ಎಂದು ಜೆಸ್ಕಾಂ ಎಇಇ ಸಂತೋಷ ತಿಳಿಸಿದರು.ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ, ಡಿಎಚ್ಒ ಡಾ.ಸಲೀಂ,ತಾ.ಪಂ.ಇಒ ಎಸ್.ಎಸ್.ಪ್ರಕಾಶ, ಗ್ರಾ.ಪಂ.ಅಧ್ಯಕ್ಷೆ ಅಮೃತ,ಉಪಾಧ್ಯಕ್ಷ ಎ.ರಮೇಶ, ಸದಸ್ಯರಾದ ಸ್ವರೂಪಾನಂದ,ರುದ್ರಗೌಡ,ಯಮನೂರಪ್ಪ ಇದ್ದರು 

ಸುದ್ದಿ ಓದಿ