ರಾಣೆಬೆನ್ನೂರಲ್ಲಿ ಶಾಸಕ ಪ್ರಕಾಶ್ ಕೋಳಿವಾಡರವರಿಂದ ಲಸಿಕಾ ವಿತರಣೆ
ರಾಣೇಬೆನ್ನೂರು೧೧: ನಗರದ ಮತ್ತು ತಾಲೂಕಿನ ಪ್ರತಿಯೊಬ್ಬ ಪಾಲಕರು ನಿಗದಿತ ಅವಧಿಯಲ್ಲಿ, ವಿಳಂಬವಿಲ್ಲದೆ ಮಕ್ಕಳಿಗೆ ಇಂದ್ರಧನುಷ್ 5.0 ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ನಗರದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ, ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಆರೋಗ್ಯ ಸಮೃದ್ಧ ಬದುಕು ಮತ್ತು ಬೆಳವಣಿಗೆಗೆ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕ ಆರೋಗ್ಯ ವೈದಾಧಿಕಾರಿ ಡಾ. ರಾಜೇಶ್ವರಿ ಕದರ ಮಂಡಲಗಿ ಅವರು, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದರ ಮೂಲಕ, ಆರೋಗ್ಯವಂತ ಮಕ್ಕಳನ್ನಾಗಿ ಮಾಡಬೇಕಾದ ಗುರು ತರವಾದ ಹೊಣೆ ಪಾಲಕರ ಮೇಲಿದೆ ಎಂದರು.
ಗರ್ಭಿಣಿ ಮಹಿಳೆಯರು ತಮ್ಮ ಸುರಕ್ಷತೆಗಾಗಿ ಹಾಗೂ ಮಗುವಿನ ಆರೈಕೆಗೆ ತಾಯಿ ಕಾರ್ಡ್ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ ಗರ್ಭಿಣಿ ಅವಧಿಯಲ್ಲಿ ಟಿ. ಟಿ. ಲಸಿಕೆ ಕಬ್ಬಿಣಾಂಶದ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕು ಎಂದರು. ತಾಲೂಕಿನ ಮತ್ತು ನಗರದ ಜನತೆಯ ಅನುಕೂಲತೆಗಾಗಿ ವಿವಿಧ ಭಾಗಗಳಲ್ಲಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸಲಾಗಿದೆ. ಅದರಂತೆ ಆಯಾ ಪ್ರದೇಶದಲ್ಲಿ ಧಾವಿಸಿ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು ಎಂದರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗೋವಿಂದ್ .ಯು,ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಅಗಸಿಬಾಗಿಲ, ಕುಮಾರಿ,ಗೀತಾ, ಡಾ: ನಾಗರಾಜ್ ಕುಡುಕಲಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.